ಕಲಬುರಗಿ: ಜೇವರ್ಗಿ ಪುರಸಭೆಯಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ 16 ಪೌರಕಾರ್ಮಿಕರಿಗೆ ಬರಬೇಕಿರುವ ₹64.80 ಲಕ್ಷ ಬಾಕಿವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಪುರಸಭೆಯಿಂದ ಅವರ ವಿರುದ್ಧ ಹೂಡಲಾದ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಎಐಟಿಯುಸಿ ಕಾರ್ಮಿಕ ಸಂಘಟನೆ ಸಂಯೋಜಿತ ಜೇವರ್ಗಿ ತಾಲ್ಲೂಕು ಪೌರಕಾರ್ಮಿಕ ಸಂಘದ ಅಧ್ಯಕ್ಷ ಮಹೇಶಕುಮಾರ್ ರಾಠೋಡ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘2018ರಲ್ಲಿ ಪೌರಕಾರ್ಮಿಕರು ಸೇವೆ ಕಾಯಮಾತಿಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರರಾದ ಪೌರಕಾರ್ಮಿಕರಿಗೆ ಸರಿಯಾದ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದ ಅಧಿಕಾರಿಗಳೇ ಬಡ, ಅಸಹಾಯಕ ಪೌರಕಾರ್ಮಿಕರ ವಿರುದ್ಧ ದಾಖಲೆಗಳನ್ನು ಫೋರ್ಜರಿ ಮಾಡಿದ ಆರೋಪ ಹೊರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಪೌರಕಾರ್ಮಿಕರಿಗೆ ನ್ಯಾಯ ಒದಗಿಸಬೇಕಾದ ಮೇಲಧಿಕಾರಿಗಳು ತಪ್ಪು ಮಾಡಿರುವ ಅಧಿಕಾರಿಗಳ ಪರವಾಗಿಯೇ ನಿಂತು ಅವರು ಹೇಳುತ್ತಿರುವ ಸುಳ್ಳುಗಳ ಆಧಾರದ ಮೇಲೆ ಪೌರಕಾರ್ಮಿಕರ ಬದುಕನ್ನು ಬೀದಿಗೆ ಬೀಳುವಂತೆ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಈ ಪೌರಕಾರ್ಮಿಕರ ಬಾಕಿ ಉಳಿಸಿಕೊಂಡಿರುವ ₹64.8 ಲಕ್ಷ ವೇತನವನ್ನು ನೀಡುವಂತೆ ಒತ್ತಾಯಿಸಿ ಕನಿಷ್ಠ ವೇತನ ಪ್ರಾಧಿಕಾರಿಯಾದ ಕಾರ್ಮಿಕ ಉಪ ಆಯುಕ್ತರ ಬಳಿ ಕ್ಲೇಮ್ ಅರ್ಜಿ ಸಲ್ಲಿಸಲಾಗಿತ್ತು. ಆದೇಶ ನೀಡಿದ ಒಂದು ತಿಂಗಳೊಳಗಾಗಿ ವೇತನ ಪಾವತಿಸುವಂತೆ 2025ರ ಜುಲೈ 31ರಂದು ಆದೇಶ ಹೊರಡಿಸಿದ್ದಾರೆ. ಆದರೂ ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ವೇತನ ಪಾವತಿಸುತ್ತಿಲ್ಲ’ ಎಂದರು.

ಬಾಬು ಬಿ. ಪಾಟೀಲ, ಪೌರಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಕ್ರೆಮ್ಮ, ರಾಘವೇಂದ್ರ, ದೇವಕ್ಕಿ, ಶಾರದಾಬಾಯಿ, ನಾಗರಾಜ, ಷಣ್ಮುಖಮ್ಮ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-34-1158103877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.