ಕಲಬುರಗಿ: ನಗರದ ಉಸ್ಮಾನಿಯಾ ಕಾಲೊನಿಯಲ್ಲಿರುವ ಮದುವೆ ಸಭಾಂಗಣದಲ್ಲಿ ಕಳ್ಳರು ₹3.69 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪಾರಾರಿಯಾಗಿದ್ದಾರೆ.

ನಗರದ ಮೋಮಿನ್ಪುರ ನಿವಾಸಿ, ಖಾಸಗಿ ಶಾಲೆ ಶಿಕ್ಷಕಿ ಮಹ್ಮದಿಬೇಗಂ ಬಾರೆ ಚಿನ್ನಾಭರಣ ಕಳೆದುಕೊಂಡವರು.

‘ಏಪ್ರಿಲ್ 29ರಂದು ನಮ್ಮ ಅತ್ತಿಗೆಯ ಮದುವೆ ನಿಗದಿಯಾಗಿತ್ತು. ಅದಕ್ಕಾಗಿ ನಾವು ಮನೆಯಿಂದ ರಾತ್ರಿ 9.30ಕ್ಕೆ ಮದುವೆ ಹಾಲ್ಗೆ ಹೋಗಿದ್ದೆವು. ನಾನು ಮದುವೆ ಹಾಲ್ನಲ್ಲೇ ರೆಡಿಯಾಗಿ ಧರಿಸಲು ಆಭರಣಗಳಿರುವ ಪರ್ಸ್ ತೆಗೆದುಕೊಂಡು ಹೋಗಿದ್ದೆ. ಅದನ್ನು ವಧುವಿನ ಕುರ್ಚಿ ಕೆಳಗೆ ಇರಿಸಿ, ಸಂಬಂಧಿರೊಂದಿಗೆ ಮಾತನಾಡುತ್ತ ಕುಳಿತಿದ್ದೆ. ಬಳಿಕ ನಾನು ರೆಡಿಯಾಗಲು ಹೊರಡುವಾಗ ಪರ್ಸ್ ಕಾಣೆಯಾಗಿತ್ತು’ ಎಂದು ಎಂ.ಬಿ.ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

‘ಪರ್ಸ್ನಲ್ಲಿ 29.5 ಗ್ರಾಂ ಚಿನ್ನಾಭರಣಗಳು ಹಾಗೂ 25 ಗ್ರಾಂ ಬೆಳ್ಳಿ ಆಭರಣಗಳು ಇದ್ದವು’ ಎಂದು ದೂರಿನಲ್ಲಿ ಮಹ್ಮದಿಬೇಗಂ ವಿವರಿಸಿದ್ದಾರೆ.

ಕಲಬುರಗಿ: ನಗರದ ಹೊರವಲಯದ ಸೇಡಂ ರಸ್ತೆಯ ಸಣ್ಣೂರು ಕ್ರಾಸ್ನಲ್ಲಿ ಗೂಡ್ಸ್ ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಪ್ರಕಾಶ್ ಜಿ.ಕೆ. ಮೃತರು. ಈ ಕುರಿತು ಕಲಬುರಗಿ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಇ–ಚಲನ್ಗಾಗಿ ಆಟೊವೊಂದರ ಫೋಟೊ ತೆಗೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಆಟೊ ಚಾಲಕ ಹಾಗೂ ಆತನೊಂದಿಗೆ ಇದ್ದ ವ್ಯಕ್ತಿ ಸೇರಿ ಹಲ್ಲೆ ನಡೆಸಿದ್ದಾರೆ.

ನಗರದ ಕುಸನೂರು ರಸ್ತೆಯ ಸರಸ್ವತಿಪುರ ನಿವಾಸಿ, ಕಾನ್ಸ್ಟೆಬಲ್ ಹಣಮಂತಪ್ಪ ಮುದ್ದಡಗಿ ನೀಡಿದ ದೂರಿನನ್ವಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ನಿಂದನೆ, ಹಲ್ಲೆಗೆ ಸಂಬಂಧಿಸಿದ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-34-1894067039

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.