ಕಾಳಗಿ: ತಾಲ್ಲೂಕಿನ ಎಲ್ಲೆಡೆ ಬುಧವಾರ ನಸುಕಿನಲ್ಲೇ ಪ್ರಾರಂಭವಾದ ಗುಡುಗು, ಮಿಂಚು, ಗಾಳಿಸಹಿತ ಭಾರಿ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿತು.

ಕಲಬುರಗಿ-ಚಿಂಚೋಳಿ ಮುಖ್ಯರಸ್ತೆ ಮಾರ್ಗದ ಕೋರವಾರ-ವಚ್ಚಾ ನಡುವೆ ಹಳ್ಳ ಉಕ್ಕಿಹರಿದು ಕೆಲಕಾಲ ರಾಜ್ಯ ಹೆದ್ದಾರಿ ಬಂದ್ ಆಗಿ ವಾಹನ ಸವಾರರು ಪರದಾಡಿದರು. ಮಂಗಲಗಿ ಬಳಿ ನಾಲಾ ತುಂಬಿ ಹರಿದು ಸೇಡಂ ಮುಖ್ಯರಸ್ತೆ ಮಾರ್ಗಕ್ಕೆ ಅಡಚಣೆ ಉಂಟುಮಾಡಿತ್ತು.

ಅರಜಂಬಗಾ ಗ್ರಾಮದಲ್ಲಿ ದತ್ತು ಗುತ್ತೇದಾರ ಎಂಬುವರ ಕಲ್ಲುಗಣಿಗೆ ಸುತ್ತಲಿನ ಮಳೆ ನೀರು ಹರಿದು ಬಂದು ಜಲಪಾತವೇ ಸೃಷ್ಟಿಯಾದಂತಾಗಿ ಗಣಿಯಲ್ಲಿ ನೀರು ತುಂಬಿಕೊಂಡು ನಷ್ಟ ಉಂಟುಮಾಡಿದೆ.

ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣ ಮತ್ತು ನೀಲಕಂಠ ಕಾಳೇಶ್ವರ ತೇರು ಮೈದಾನದಲ್ಲಿ ಹಾಗೂ ಬಸ್ ನಿಲ್ದಾಣ ಬಳಿಯ ಭರತನೂರ ರಸ್ತೆಯಲ್ಲಿ ಮಳೆನೀರು ನಿಂತಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-34-2103418136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.