ಕಾಳಗಿ: ಬಹಳ ವರ್ಷಗಳಿಂದಲೂ ಕಲಬುರಗಿ ಜಿಲ್ಲೆಯಲ್ಲೇ ನೀರಿನ ಬುಗ್ಗಿಗೆ ಹೆಸರುವಾಸಿಯಾಗಿರುವ ಕಾಳಗಿ ಪಟ್ಟಣದಲ್ಲಿ ಈಚೆಗೆ ಜಲಮೂಲಗಳು ಕಡಿಮೆಯಾಗುತ್ತಿವೆಯೇ (ಬತ್ತುತ್ತಿವೆ) ಎಂಬ ಪ್ರಶ್ನೆ ಕಾಡುತ್ತಿದೆ.

ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ನೀರಿನ ಬುಗ್ಗಿ (ರೌದ್ರಾವತಿ ನದಿ) ಮತ್ತು ಅನೇಕ ಪುಷ್ಕರಣಿಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣದಲ್ಲಿ ಇಳಿಮುಖ ಕಂಡುಬರುತ್ತಿದೆ.

ಮೂರು ದಶಕದ ಹಿಂದೆ ಮಳಖೇಡ ಸಿಮೆಂಟ್ ಕಾರ್ಖಾನೆಗೆ ತಿಂಗಳುಗಟ್ಟಲೇ ಇಲ್ಲಿನ ನೀರನ್ನು ಹಗಲು-ರಾತ್ರಿ ಕೊಂಡೊಯ್ದಿದ್ದರೂ ಒಂದಿಂಚೂ ಕಡಿಮೆಯಾಗದ ನೀರಿನ ಪ್ರಮಾಣ ಇತ್ತೀಚೆಗೆ ನೆಲಕಚ್ಚಲು ಆರಂಭಿಸಿದೆ. ಬಿಸಿಲಿನ ಧಗೆಯಿಂದ ಪಾರಾಗಲು ಸ್ಥಳೀಯ ಮತ್ತು ಸುತ್ತಲಿನ ಅದೆಷ್ಟೋ ಯುವಕ-ಯುವತಿಯರು, ಚಿಕ್ಕಮಕ್ಕಳು ಇಲ್ಲಿನ ನೀರಿನ ಬುಗ್ಗಿಗೆ ಈಜಾಡಲು ಬರುತ್ತಾರೆ. ಕಳೆದ ವರ್ಷದ ನೀರಿನ ಆಳ ಈ ವರ್ಷ ಇಲ್ಲ ಎನ್ನುತ್ತಾರೆ ಈಜುಗಾರರು.

‘ಹಲವು ವರ್ಷಗಳಿಂದ ಪಟ್ಟಣದ ಕೆಲ ವಾರ್ಡ್ಗಳಿಗೆ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾಲುವೆಗೆ ದಿನನಿತ್ಯ ಈ ಬುಗ್ಗಿ ನೀರನ್ನೇ ಹರಿಸಲಾಗುತ್ತಿದೆ. ಅಲ್ಲದೇ ಅನೇಕ ರೈತರು ತಮ್ಮ ಜಮೀನುಗಳಿಗೆ ಇಲ್ಲಿನ ನೀರನ್ನೇ ಪಂಪ್ಸೆಟ್ ಮುಖಾಂತರ ಪಡೆಯುತ್ತಾರೆ. ಹೀಗಿದ್ದೂ ಕೆಲವರ್ಷಗಳ ಹಿಂದೆ ಚೆನ್ನಾಗಿದ್ದ ನೀರಿನ ಪ್ರಮಾಣ ಈ ವರ್ಷ ಕಡಿಮೆಯಾದಂತೆ ಕಾಣಿಸುತ್ತಿದೆ’ ಎಂದು ಪ್ರತ್ಯಕ್ಷದರ್ಶಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಊರೊಳಗಿನ ತೆರೆದಬಾವಿಗಳು ಬಳಕೆಯಿಲ್ಲದೆ ಪಾಳುಬಿದ್ದಿವೆ. ಸ್ಥಿತಿವಂತರು ಕೊರೆಸುತ್ತಿರುವ ಬೋರ್ವೆಲ್ಗಳ ಸಂಖ್ಯೆ ದಿನೇದಿನೆ ಹೆಚ್ಚಾಗತೊಡಗಿದೆ. ಬಳಕೆಗೆ ತಕ್ಕಂತೆ ನೀರು ಉಪಯೋಗಿಸುವವರು ಕಡಿಮೆಯಾಗಿ ವಾರ್ಡ್ಗಳ ಎಲ್ಲೆಂದರಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಮನೆಗಳ ಮೇಲಿನ ಸಿಂಟೆಕ್ಸ್ ಟ್ಯಾಂಕ್ ತುಂಬಿ ನೀರು ಹೊರ ಚೆಲ್ಲಿದ್ದರೂ ಕ್ಯಾರೇ ಎನ್ನುವರಿಲ್ಲದಂತಾಗಿದೆ.

ಹಲವರು ನಳಗಳಿಗೆ ಮೋಟಾರ್ ಹಚ್ಚಿ ನೀರು ಪಡೆಯುತ್ತಿದ್ದರೆ, ಅನೇಕರು ನೀರು ಸಿಗದಂತಾಗಿ ಪರದಾಡುತ್ತಿದ್ದಾರೆ. ನಳ ಜೋಡಣೆ ನೆಪದಲ್ಲಿ ಅದೆಷ್ಟೋ ಪೈಪ್ಗಳು ಲಿಕೇಜ್ ಆಗಿ ರಸ್ತೆ, ಚರಂಡಿಗೆ ನೀರು ಬೇಕಾಬಿಟ್ಟಿ ಹರಿಯುತ್ತಿದೆ.

ಕೆಲವೊಂದು ಊರಲ್ಲಿ ಹನಿ ನೀರಿಗೆ ಹಾಹಾಕಾರ ಇದೆ. ಕಾಳಗಿಯಲ್ಲಿ ದೇವರೇ ಕೊಟ್ಟ ವರದಂತೆ ಸಾಕಷ್ಟು ನೀರಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಬೇಕಾಬಿಟ್ಟಿಯಾಗಿ ಝರಿಗಳು ಮುಚ್ಚುತ್ತಿವೆ. ಒಂದುವೇಳೆ ಸ್ಥಳೀಯ ಆಡಳಿತದ ನಿಷ್ಕಾಳಜಿ ಹೀಗೆ ಮುಂದುವರಿದರೆ ಇಲ್ಲಿಯೂ ‘ಜಲಕ್ಷಾಮ’ ಎದುರಾಗುವಲ್ಲಿ ಯಾವ

ಮುಚ್ಚುತ್ತಿರುವ ನೀರಿನ ಝರಿಗಳು

ಅನಗತ್ಯ ನೀರು ಪೋಲು ಮಾಡುವವರ ಮನೆಗಳನ್ನು ಪತ್ತೆಹಚ್ಚಿ ನೋಟಿಸ್ ನೀಡಲಾಗುವುದು. ಒಂದು ವೇಳೆ ನಿಯಮ ಮೀರಿದಲ್ಲಿ ಕಠಿಣಕ್ರಮ ಜರುಗಿಸಲಾಗುವುದು
ಪಂಕಜಾ ಎ., ಮುಖ್ಯಾಧಿಕಾರಿ ಕಾಳಗಿ ಪಟ್ಟಣ ಪಂಚಾಯಿತಿ

ನಮ್ಮ ವಾಎರ್ಡ್ನಲ್ಲಿ ಎಲ್ಲೆಂದರಲ್ಲಿ ಪೈಪ್ಲೈನ್ ಲಿಕೇಜ್ ಇವೆ. ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದೆ ಮಹಿಳೆಯರು ಪರದಾಡುತ್ತಿದ್ದಾರೆ
ಶೇಖರ ಪಾಟೀಲ, ವಾರ್ಡ್ ನಂ.4ರ ನಿವಾಸಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-31-570678278

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.