ಭೀಮಣ್ಣ ಬಾಲಯ್ಯ

ಕಲಬುರಗಿ: ಕೃಷಿಕರಿಗೆ ಪ್ರತಿ ಹಂತದಲ್ಲೂ ನೆರವಾಗಬೇಕಾದ ರೈತ ಸಂಪರ್ಕ ಕೇಂದ್ರಗಳಲ್ಲಿ ‘ಸಿಬ್ಬಂದಿ ಕೊರತೆ’ ರೋಗ ಕಾಣಿಸಿಕೊಂಡಿದೆ. ಇದರಿಂದ ರೈತರಿಗೆ ಸಮರ್ಪಕ ಬಿತ್ತನೆ ಬೀಜ, ರಸಗೊಬ್ಬರ, ಸರ್ಕಾರಿ ಯೋಜನೆಗಳ ಮಾಹಿತಿ, ತಾಂತ್ರಿಕ ಸಲಹೆ ಹಾಗೂ ಮಾರ್ಗದರ್ಶನ ಸಿಗುತ್ತಿಲ್ಲ.

ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ(ಎಒ), ಸಹಾಯಕ ಕೃಷಿ ಅಧಿಕಾರಿ(ಎಎಒ) ಹಾಗೂ ದಾಸ್ತಾನು ನಿರ್ವಹಣಾ ಸಿಬ್ಬಂದಿ ಇರಬೇಕು. ಆದರೆ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮಂಜೂರಾದ ಒಟ್ಟು ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳಲ್ಲಿ ಶೇ 92.30ರಷ್ಟು ಹುದ್ದೆಗಳು ಖಾಲಿ ಇವೆ.

ಈ ಪ್ರದೇಶದಲ್ಲಿ ಒಟ್ಟು 166 ರೈತ ಸಂಪರ್ಕ ಕೇಂದ್ರಗಳಿವೆ. 675 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳು ಮಂಜೂರಾಗಿವೆ. ಆ ಪೈಕಿ ಕೇವಲ 184 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 491 ಹುದ್ದೆಗಳು ಖಾಲಿ ಇವೆ.

ಏಳು ಜಿಲ್ಲೆಗಳ ಬಹುತೇಕ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಮಂಜೂರಾದ ಒಟ್ಟು 442 ಹುದ್ದೆಗಳಲ್ಲಿ ಬರೋಬ್ಬರಿ 408 ಹುದ್ದೆಗಳು ಖಾಲಿ ಇವೆ. ಕೇವಲ 34 ಜನ ಕೆಲಸ ಮಾಡುತ್ತಿದ್ದಾರೆ.

ಕಲಬುರಗಿಯಲ್ಲಿ ಹೆಚ್ಚು ಹುದ್ದೆ ಖಾಲಿ: 32 ರೈತ ಸಂಪರ್ಕ ಕೇಂದ್ರಗಳನ್ನು ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಅಂದರೆ, 86 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಖಾಲಿ ಇವೆ. ಮಂಜೂರಾದ 95 ಹುದ್ದೆಗಳಲ್ಲಿ ಕೇವಲ 8 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.

ಬೀದರ್ ಜಿಲ್ಲೆಗೆ 71 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 67 ಹುದ್ದೆಗಳು ಖಾಲಿ ಇವೆ. ಕೊಪ್ಪಳದಲ್ಲಿ 6 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. 54 ಹುದ್ದೆ ಖಾಲಿ ಬಿದ್ದಿವೆ. ಬಳ್ಳಾರಿ 23, ಹೆಚ್ಚು ಕೇಂದ್ರಗಳನ್ನು ಹೊಂದಿದ ರಾಯಚೂರು ಜಿಲ್ಲೆಯಲ್ಲಿ 75, ವಿಜಯನಗರ 54 ಹಾಗೂ ಯಾದಗಿರಿಯಲ್ಲಿ 49 ಹುದ್ದೆಗಳು ಖಾಲಿ ಇವೆ.

ಹುದ್ದೆಗಳು ಖಾಲಿ ಇರುವ ಕಾರಣ ಇರುವ ಅಧಿಕಾರಿಗಳನ್ನೇ ಬೇರೆ ಬೇರೆ ಕೇಂದ್ರಗಳಿಗೆ ನಿಯೋಜನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇರುವ ಅಧಿಕಾರಿಗಳೂ ಕಚೇರಿ ಕೆಲಸದ ಕಾರಣ ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರಗಳಿಗೆ ತೆರಳಿದರೆ, ಕೇಂದ್ರದಲ್ಲಿ ಯಾರೂ ಇರದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-35-745614906

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.