ಕಲಬುರಗಿ: ‘ಮುಂದಿನ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಒಳಗೊಂಡಂತೆ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ದೂರದೃಷ್ಟಿಯುಳ್ಳ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ನಗರದಲ್ಲಿ ಕೆಕೆಆರ್ಡಿಬಿ ಶುಕ್ರವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ದೃಷ್ಟಿಕೋನ ಯೋಜನೆ 2026–2031 ಕಾರ್ಯಾಗಾರದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.

‘371(ಜೆ) ಕಲಂ ಜಾರಿಯಿಂದ ರಚನೆಯಾದ ಕೆಕೆಆರ್ಡಿಬಿಗೆ 2013–14ರಿಂದ 2025–26ರವರೆಗೆ ಸುಮಾರು ₹23,704 ಕೋಟಿ ಅನುದಾನ ಹಂಚಿಕೆಯಾಗಿದೆ. ಅದರಲ್ಲಿ ₹17,005 ಕೋಟಿಯಷ್ಟು ವಿವಿಧ ಕ್ಷೇತ್ರಗಳಿಗೆ ವೆಚ್ಚ ಮಾಡಲಾಗಿದೆ. ಆದರೂ ಈ ಭಾಗದಲ್ಲಿ ತಲಾ ಆದಾಯ ಚೇತರಿಕೆ ಕಂಡಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇನ್ನೂ ಹಿಂದಿದ್ದೇವೆ’ ಎಂದರು.

‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹಿಂದುಳಿದಿರುವಿಕೆ ಹೋಗಲಾಡಿಸಲು ಮೂಲಸೌಕರ್ಯ ಸೃಷ್ಟಿ, ಬಂಡವಾಳ ಹಾಕುವುದಷ್ಟೇ ಅಲ್ಲ, ಮಾನವ ಬಂಡವಾಳ ಸೃಷ್ಟಿ ನಮ್ಮ ಆದ್ಯತೆಯಾಗಬೇಕಿದೆ. ಪ್ರಾದೇಶಿಕ ಅಸಮಾನತೆ ನಿರ್ಮೂಲನೆ, ಅಪೌಷ್ಟಿಕ ಮುಕ್ತ ಪ್ರದೇಶ, ಉತ್ತಮ ಆರೋಗ್ಯ ಮತ್ತು ಶಿಕ್ಷಣ, ತಲಾವಾರು ಆದಾಯ ಮತ್ತು ಎಚ್.ಡಿ.ಐ ವೃದ್ಧಿ ನಮಗೆ ಸವಾಲಾಗಿವೆ’ ಎಂದು ಹೇಳಿದರು.

‘ಸವಾಲುಗಳನ್ನು ಮೀರಿ ನಿಲ್ಲಲು ಕೊರತೆಯ ದತ್ತಾಂಶಗಳನ್ನು ಸಂಗ್ರಹಿಸಬೇಕಿದೆ. ತ್ವರಿತಗತಿಯಲ್ಲಿ ಪ್ರಗತಿ ಹೊಂದಲು ಹೊಸ ಆಲೋಚನೆಗಳು, ಚಿಂತನೆಗಳಿಂದ ಅಭಿವೃದ್ಧಿಯ ಅಂತರ ತಗ್ಗಿಸಲು ಕ್ರಿಯಾ ಯೋಜನೆಗಳು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಇಲಾಖೆಗಳು ಕಾರ್ಯೋನ್ಮುಖರಾಗಬೇಕು’ ಎಂದು ಸಲಹೆ ನೀಡಿದರು.

ಕೆಕೆಆರ್ಡಿಬಿಯ ಹೆಚ್ಚುವರಿ ನಿರ್ದೇಶಕಿ ಪ್ರವೀಣಪ್ರಿಯಾ ಮಾತನಾಡಿ, ‘ಕೆಕೆಆರ್ಡಿಬಿಗೆ ಇದೂವರೆಗೆ ಬಿಡುಗಡೆಯಾದ ₹23,704 ಕೋಟಿ ಅನುದಾನದಲ್ಲಿ ₹17,105 ಕೋಟಿ ಖರ್ಚು ಮಾಡಲಾಗಿದೆ. 45,066 ಕಾಮಗಾರಿಗಳ ಪೈಕಿ 36,072 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ಬೀದರ್ ಜಿಲ್ಲೆಗೆ ₹3,007 ಕೋಟಿ, ಕಲಬುರಗಿ ಜಿಲ್ಲೆಗೆ ₹4,559.39 ಕೋಟಿ, ಯಾದಗಿರಿಗೆ ₹2,417.06 ಕೋಟಿ, ರಾಯಚೂರು ಜಿಲ್ಲೆಗೆ ₹3,784.30 ಕೋಟಿ, ಕೊಪ್ಪಳ ಜಿಲ್ಲೆಗೆ ₹2,778.35 ಕೋಟಿ, ಬಳ್ಳಾರಿ ಜಿಲ್ಲೆಗೆ ₹1,482.49 ಕೋಟಿ, ವಿಜಯನಗರ ಜಿಲ್ಲೆಗೆ ₹1,954.18 ಕೋಟಿ ಹಾಗೂ ಪ್ರದೇಶಕ್ಕೆ ಸೀಮಿತವಾದ ಬೃಹತ್ ಯೋಜನೆಗಳಿಗೆ ₹1,721 ಕೋಟಿ ಖರ್ಚು ಮಾಡಲಾಗಿದೆ’ ಎಂದು ವಿವರಿಸಿದರು.

ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಕಾರ್ಯಕ್ರಮ ಉದ್ಘಾಟಿಸಿದರು. ಕೆಕೆಆರ್ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಆರ್ಥಿಕ ತಜ್ಞೆ ಪ್ರೊ.ಛಾಯಾ ದೇಗಾಂವಕರ್, ಜಿಲ್ಲಾಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಸುರೇಶ ಇಟ್ನಾಳ, ಕೆ.ನಾಗೇಂದ್ರ ಪ್ರಸಾದ, ಪೂವಿತಾ ಎಸ್., ಕವಿತಾ ಎಸ್. ಮನ್ನಿಕೇರಿ, ಶಿಲ್ಪಾ ಶರ್ಮಾ, ಹರ್ಷಲ್ ಭೋಯರ್, ಜಿಲ್ಲಾ ಪಂಚಾಯಿತಿ ಸಿಇಒಗಳಾದ ಭಂವರ್ ಸಿಂಗ್ ಮೀನಾ, ಗಿರೀಶ ಡಿ. ಬದೋಲೆ, ಎಂ.ಡಿ.ಹ್ಯಾರಿಸ್ ಸುಮೈರ್, ಲವೀಶ್ ಒರಡಿಯಾ, ಈಶ್ವರ ಕುಮಾರ ಕಾಂದೂ, ವರ್ಣಿತ್ ನೇಗಿ, ಮಹಮ್ಮದ್ ಅಕ್ರಮ ಅಲಿ ಶಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಕಲಬುರಗಿ ಉಪವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಮಹಾನಗರ ಪಾಲಿಕೆ, ನಗರಸಭೆ, ಕೃಷಿ, ಆರೋಗ್ಯ, ತೋಟಗಾರಿಕೆ, ಕೈಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ಪ್ರಮುಖ ಇಲಾಖೆಗಳ ಅಧಿಕಾರಿಗಳಿದ್ದರು. ಕೆಕೆಆರ್ಡಿಬಿ ಉಪ ಕಾರ್ಯದರ್ಶಿ ಸುರೇಖಾ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-2025004069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.