ಕಲಬುರಗಿ: ಜಿಲ್ಲಾ ಆದಿ ಬಣಜಿಗ ಸಮಾಜದ ವತಿಯಿಂದ ನಗರದ ಅಫಜಲಪುರ ರಸ್ತೆಯ ನಾಗರಕಟ್ಟೆ ದೇವಸ್ಥಾನದ ಹತ್ತಿರ ನಿರ್ಮಿಸುತ್ತಿರುವ ಕಲ್ಯಾಣಮಂಟಪ ಮತ್ತು ವಸತಿನಿಲಯ ಭೂಮಿಪೂಜೆ (ಅಡಿಗಲ್ಲು) ಸಮಾರಂಭವನ್ನು ಏ.5ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ಬರುಡೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೀದರ್ನ ಶಿವಕುಮಾರ ಸ್ವಾಮೀಜಿ, ಜೈ ಭಾರತ ಮಾತಾ ಸೇವಾ ಸಮಿತಿ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರು ಸಾನ್ನಿಧ್ಯ ವಹಿಸುವರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸುವರು. ಸಚಿವರು, ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳುವರು’ ಎಂದರು.

ಸಮಾಜದ ಗೌರವಾಧ್ಯಕ್ಷ ಬಸವರಾಜ ಕೊನೇಕ ಮಾತನಾಡಿ, ‘ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಶರಣಸಿರಸಗಿ ಹತ್ತಿರ 3 ಎಕರೆ ಜಮೀನು ಖರೀದಿಸಲಾಗಿದ್ದು, ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಾಸ್ಟೆಲ್ ಕಟ್ಟಲಾಗುತ್ತಿದೆ. ಮುಂದೆ ಸ್ಪರ್ಧಾತ್ಮ ಪರೀಕ್ಷೆಗಳಿಗೆ ತರಬೇತಿ, ಶಿಷ್ಯವೇತನ, ಉಚಿತ ಪುಸ್ತಕ ನೀಡುವ ಗುರಿ ಹೊಂದಿದ್ದೇವೆ. ವಿವಾಹ ಸೇರಿದಂತೆ ಸಮಾಜೋಪಯೋಗಿ ಕಾರ್ಯಗಳಿಗಾಗಿ ಕಲ್ಯಾಣಮಂಟಪ ನಿರ್ಮಿಸಲಾಗುತ್ತಿದೆ’ ಎಂದರು.

ಸಮಾಜದ ಕಾರ್ಯದರ್ಶಿ ರಾಜೇಂದ್ರ ಕರೆಕಲ್, ರಾಜು ನವಲದಿ, ಸತೀಶ್ ಪಾಟೀಲ, ಮಾದೇವಪ್ಪ ಪಾಟೀಲ, ಡಿ.ಕೆ.ಪಾಟೀಲ, ಬಸಣ್ಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-34-1086947879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.