ಕಮಲಾಪುರ: ತಾಲ್ಲೂಕಿನಲ್ಲಿ ಕೂಡಲೇ ಎಲ್ಲ ಕಚೇರಿ ಸ್ಥಾಪಿಸುವಂತೆ ಒತ್ತಾಯಿಸಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ರೈತ ಹೋರಾಟಗಾರ ಸುನಿಲ ಮಾರುತಿ ಮಾನಪಡೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.

‘ಕೆಲವು ಕಚೇರಿಗಳು ಆರಂ ಭಿಸಲಾಗಿದೆ. ಕೃಷಿ, ಶಿಕ್ಷಣ, ಉಪನೋಂದಣಾಧಿಕಾರಿ, ಪೊಲೀಸ್ ಇಲಾಖೆ ಇನ್ನೂ ಆಳಂದ ತಾಲ್ಲೂಕಿನಲ್ಲಿವೆ. ಪ್ರತಿಯೊಂದು ವಿಷಯಕ್ಕೆ ಆಳಂದ - ಕಮಲಾಪೂರ ಎರಡೂ ತಾಲ್ಲೂಕಿಗೆ ಅಲೆದಾಡುವ ಸ್ಥಿತಿಗೆ ಬಂದಿದೆ. ಆಳಂದ ತಾಲ್ಲೂಕಿನಿಂದ ಬೇರ್ಪಟ್ಟ 20 ಗ್ರಾಮಗಳಿಗೆ ಕಮಲಾಪುರ ತಾಲ್ಲೂಕು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

‘ವಿ.ಕೆ.ಸಲಗರ ಹೋಬಳಿ ಗ್ರಾಮ ಗಳಿಗೆ ತಾಲ್ಲೂಕು ಕೇಂದ್ರಕ್ಕೆ ನೇರ ರಸ್ತೆ ಸಂಪರ್ಕ ಕಲ್ಪಿಸಬೇಕು. ಲಾಡಮುಗಳಿ, ಅಂಬಲಗಾ, ಕಲಕುಟಗಿ, ಹಿಪ್ಪರಗಿ ಗ್ರಾಮಗಳ ರಸ್ತೆ ಪೂರ್ಣಗೊಳಿಸಬೇಕು. ಆಳಂದ ತಾಲ್ಲೂಕಿನಿಂದ ಬೇರ್ಪಟ್ಟ ವಿ.ಕೆ.ಸಲಗರ ಹೋಬಳಿಗೆ ಪ್ರತ್ಯೇಕ ಪೊಲೀಸ್ ಠಾಣೆ ಒದಗಿಸಬೇಕು’ ಎಂದು ಕೋರಿದ್ದಾರೆ.

‘ವಿ.ಕೆ.ಸಲಗರ ಹೋಬಳಿಯಲ್ಲಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಂಬೇಡ್ಕರ್ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಕಚೇರಿ ಸ್ಥಾಪನೆ ಮಾಡಬೇಕು. ಉಪನೋಂದಣಾ ಅಧಿಕಾರಿ ಕಚೇರಿ, ಕೃಷಿ ಇಲಾಖೆ ಕಚೇರಿ, ಬಸ ನಿಲ್ದಾಣ ಮತ್ತು ಬಸ್ ಡಿಪೊ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-31-1469807862

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.