ಶಹಾಬಾದ್: ‘ತಾಲ್ಲೂಕಿನ ಮರತೂರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥ ದೇವರ ಪಲ್ಲಕ್ಕಿ ಉತ್ಸವವು ಮೇ 15 ರಿಂದ 25ರವರೆಗೆ ನಡೆಯಲಿದೆ’ ಎಂದು ಕಾರ್ಯಕ್ರಮದ ಸಂಚಾಲಕ ರವೀಂದ್ರ ನರೋಣಿ ತಿಳಿಸಿದರು.

ಕಾಶಿ ವಿಶ್ವನಾಥ ದೇವಸ್ಥಾನ ಸಮಿತಿ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಲ್ಯಾಣಿ ಚಾಲುಕ್ಯರ ಕಾಲದ ವಿಶ್ವನಾಥನ ದೇಗುಲವು ಭವ್ಯ ಇತಿಹಾಸ ಹೊಂದಿದ್ದು ವಿಜ್ಞಾನೇಶ್ವರರು ಮಿತಾಕ್ಷರ ಸಂಹಿತೆ ಗ್ರಂಥ ಬರೆದ ಪವಿತ್ರ ಸ್ಥಳವಾಗಿದೆ. 3 ವರ್ಷಕ್ಕೊಮ್ಮೆ ಪಲ್ಲಕ್ಕಿ ಉತ್ಸವ ನಡೆಸಲಾಗುತ್ತಿದ್ದು, ಈ ಬಾರಿ ಅದ್ದೂರಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘15ರಂದು ಸಂಜೆ 7ಕ್ಕೆ ರೇಣುಕ ವಿಜಯ ಪುರಾಣಕ್ಕೆ ಮುಗುಳನಾಗಾವಿ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಚಾಲನೆ ನೀಡುವರು. ಕಲಬುರಗಿಯ ಚೌಡಾಪುರ ಮಠದ ರಾಜಶೇಖರ ಶಿವಾಚಾರ್ಯ, ಸ್ಟೇಷನ್ ಬಬಲಾದ ಶ್ರೀಗಳ ನೇತೃತ್ವ ಹಾಗೂ ಮರತೂರ ವಿರಕ್ತ ಮಠದ ಶ್ರೀಶೈಲ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.

‘25ರ ಬೆಳಿಗ್ಗೆ 9ಕ್ಕೆ ಪಲ್ಲಕ್ಕಿ ಉತ್ಸವ, ಗಂಗಾ ಸ್ನಾನ, ಸಂಜೆ 6ಕ್ಕೆ ಶ್ರೀಶೈಲದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಪುರಪ್ರವೇಶ, 7ಕ್ಕೆ ಪುರಾಣ ಮಂಗಲ, ಧರ್ಮಸಭೆ ಜರುಗಲಿದೆ. ಹೊನ್ಕಿರಣಗಿಯ ಚಂದ್ರಗುಂಡ ಶಿವಾಚಾರ್ಯ, ಮುಗುಳನಾಗಾವಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಮಹಾರಾಷ್ಟ್ರದ ನೂಲನ ಗುರುಸಿದ್ದ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು’ ಎಂದರು.

‘ಹೊನ್ನಕಿರಣಗಿಯ ರಾಚೋ ಟೇಶ್ವರ ಸಂಸ್ಥಾನ ಮಠದ ವೈದಿಕ ಬಳಗದಿಂದ ಕಾಶಿ ಗಂಗಾರತಿ ನಡೆಯಲಿದೆ. 26ರ ಬೆಳಿಗ್ಗೆ 9ಕ್ಕೆ ಗ್ರಾಮದಲ್ಲಿ ವಾದ್ಯವೃಂದ, ಕಳಸದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-31-1605814116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.