ಕಲಬುರಗಿ: ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಿದ 14ನೇ ಶತಮಾನದ ಸೂಫಿ ಸಂತ ಖಾಜಾ ಬಂದಾನವಾಜ್ರ 622ನೇ ಉರುಸ್ ಆಚರಣೆ ಮಂಗಳವಾರ ಸಂಪನ್ನಗೊಂಡಿತು.

ಮೊದಲ ದಿನ ಗಂಧದ ಮೆರವಣಿಗೆ ನಡೆದಿತ್ತು. ಎರಡನೇ ದಿನ ದೀಪೋತ್ಸವ ಜರುಗಿತ್ತು. ಮೂರನೇ ದಿನವಾದ ಮಂಗಳವಾರ ದರ್ಗಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿಶೇಷವಾಗಿ ಜಿಯಾರತ್, ಫಾತೇಖಾನಿ, ಖತ್ಮ್–ಎ–ಕುರ್ಆನ್ ಹಾಗೂ ಕಸೀದಾ ಬುರ್ದಾ ಶರೀಫ್ ಕಾರ್ಯಕ್ರಮ ನಡೆಯಿತು.

ದರ್ಗಾದಲ್ಲಿ ಬೆಳಿಗ್ಗೆ 8 ಗಂಟೆ ಹೊತ್ತಿಗೆ ‘ಖಿದ್ಮತ್–ಎ–ಚಿರಾಗ್’ ಎಂಬ ದೀಪಗಳನ್ನು ಬೆಳಗುವ ಆಚರಣೆ ನಡೆಯಿತು. ಬಳಿಕ ದರ್ಗಾದ ಮಸೀದಿಯಲ್ಲಿ ಕಿರಾತ್ ಹಾಗೂ ನಾಥ್ಗಳನ್ನು ಪ್ರಸ್ತುತ ಪಡಿಸಲಾಯಿತು. ಸಂಜೆ 4 ಗಂಟೆಗೆ ಕುರ್ಆನ್ ಪಠಣ ಸಂಪನ್ನಗೊಳಿಸಲಾಯಿತು. ಸಂಜೆ 5 ಗಂಟೆ ನಮಾಜ್ ಬಳಿಕ ಪ್ರವಾದಿ ಮುಹಮ್ಮದ್ ಗರಿಮೆ ಸಾರುವ ‘ಕಸೀದಾ ಬುರ್ದಾ’ ಪ್ರಸ್ತುತ ಪಡಿಸಲಾಯಿತು. ಇದನ್ನು ಹೈದರಾಬಾದ್ನ ಹಬೀಬ್ ಚೆಹಲ್ ಕಾಫ್ ಗುಂಪು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.

ಸಂಜೆ 7 ಗಂಟೆ ಪ್ರಾರ್ಥನೆಯ ಬಳಿಕ ಖಾಜಾ ಬಂದಾನವಾಜ್ರ ಗದ್ದುಗೆ ಪ್ರದೇಶದಲ್ಲಿ ಜಿಯಾರತ್ ನಡೆಯಿತು. ದರ್ಗಾದ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅವರು ಫಾತೇಹಾ ಖ್ವಾನಿ ನೆರವೇರಿಸಿದರು. ನಂತರ ಪ್ರಸಾದ ವಿತರಣೆ ಜರುಗಿತು. ರಾತ್ರಿ ನಮಾಜ್ ಬಳಿಕ ಮೆಹಫಿಲ್–ಎ–ಬಂದ್ ಸಮಾ ಜರುಗಿತು. ಈ ಮೂಲಕ ಮೂರು ದಿನಗಳ ಉರುಸ್ ಆಚರಣೆಗೆ ತೆರೆ ಬಿತ್ತು. ಅಜ್ಮೀರ್ ಶರೀಫ್ನ ಅಮೀನ್ ಮಿಯಾ ಚಿಸ್ತಿ, ಸೈಯದ್ ಮುಹಮ್ಮದ್ ಸೈಯದ್ ಹುಸೇನಿ, ಸೈಯದ್ ಶಾ ತಕಿಉಲ್ಲಾ ಹುಸೇನಿ, ಸೈಯದ್ ಅಹ್ಮದ್ ಹುಸೇನಿ, ಸೈಯದ್ ಬಾಖರ್ ಶಬ್ಬೀರ್ ಹುಸೇನಿ, ಮಿರ್ ಸರ್ದಾರುದ್ದೀನ್ ಅಲಿ ಖಾನ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-34-1735640058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.