ಜೇವರ್ಗಿ: ‘ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್ ತಡೆಯಲು ಕೆಕೆಆರ್ಡಿಬಿ ಇದೇ ಮೊದಲ ಬಾರಿಗೆ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 9ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಉಚಿತ ಎಚ್ಪಿವಿ ಲಸಿಕೆ ನೀಡಲು ಯೋಜನೆ ರೂಪಿಸುತ್ತಿದೆ’ ಎಂದು ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ತಾಲ್ಲೂಕಿನ ಗಂವ್ಹಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಧರ್ಮಸಿಂಗ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಸ್ತನ, ಗರ್ಭಕೋಶ ಕ್ಯಾನ್ಸರ್ ಹಾಗೂ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೆಕೆಆರ್ಡಿಬಿ ಈ ಲಸಿಕೆ ನೀಡುವ ಯೋಜನೆ ರೂಪಿಸಲಿದೆ. ಇದಕ್ಕಾಗಿ ಮಂಡಳಿಯಲ್ಲಿ ₹15 ಕೋಟಿ ಮೀಸಲಿಡಲಾಗಿದೆ’ ಎಂದರು.

‘ಆರೋಗ್ಯ ಸೇವೆಗಳು ಹಳ್ಳಿ ಜನರಿಗೆ ಅವರಿರುವ ಸ್ಥಳದಲ್ಲೇ ಲಭ್ಯವಾಗುವಂತೆ ಮಾಡುವುದೇ ತಮ್ಮ ಗುರಿ. ಮಾಜಿ ಸಿಎಂ ದಿ.ಧರಂಸಿಂಗ್ ಪ್ರತಿಷ್ಠಾನದ ಅಡಿಯಲ್ಲಿ ಈಗಾಗಲೇ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ವರ್ಷದುದ್ದಕ್ಕೂ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತ ಜೇವರ್ಗಿ ಜನರ ಸಂಪೂರ್ಣ ಆರೋಗ್ಯ ರಕ್ಷಣೆಯ ಸಂಕಲ್ಪ ಮಾಡಲಾಗಿದೆ’ ಎಂದರು.

‘ಆರೋಗ್ಯವೇ ಭಾಗ್ಯ. ಆರೋಗ್ಯ ಇದ್ದರೆ ಬದುಕಲ್ಲಿ ಎಲ್ಲವೂ ಉಂಟು. ಹೀಗಾಗಿ ಜೇವರ್ಗಿಯ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಆರೋಗ್ಯ ಶಿಬಿರ ನಡೆಸಿ, ಸಾಮಾನ್ಯ ರೋಗಗಳ ತಪಾಸಣೆ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಪತ್ತೆ, ಕಿಡ್ನಿ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ಉಚಿತ ತಪಾಸಣೆ ನಡೆಸಿ ಅಗತ್ಯ ಮಾರ್ಗದರ್ಶನ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

ಗಂವ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ವೈದ್ಯರಾದ ಡಾ.ಕಾಮೇಶ್ವರಿ ದೇವಿ, ಡಾ.ಮಂಜುನಾಥ ದೋಶೆಟ್ಟಿ, ಡಾ.ಕೀರ್ತಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ತಂಡ ಹಾಗೂ ಸ್ಥಳೀಯ ಆಶಾ ಕಾರ್ಯಕರ್ತರ ತಂಡ ಶಿಬಿರದಲ್ಲಿ ತಪಾಸಣೆ ನಡೆಯಿತು.

ಶಾಸಕ ಡಾ.ಅಜಯ್ ಸಿಂಗ್ ಅವರು ವೈದ್ಯರಾಗಿ ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಮೇಶ ಶರ್ಮಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿ, ರುಕುಂ ಪಟೇಲ, ಜಿ.ಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಆಂದೋಲಾ, ಶಾಂತಪ್ಪ ಕೂಡ್ಲಗಿ, ವಸಂತ ನರಿಬೋಳ, ಕಾಶೀಂ ಪಟೇಲ್ ಮುದಬಾಳ, ಮುನ್ನಾ ಪಟೇಲ್ ಯಾಳವಾರ, ವಿಜಯಕುಮಾರ ಪಾಟೀಲ, ಬಸವರಾಜ ಪಾಟೀಲ, ಸೋಫಿಸಾಬ ಗಂವ್ಹಾರ, ವಿಜಯಕುಮಾರ ಹಿರೇಮಠ, ಮಹಿಮೂದ್ ನೂರಿ, ಗೌಸುದ್ದೀನ್ ಖಾದ್ರಿ, ವಿಶ್ವರಾದ್ಯ ಗಂವ್ಹಾರ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-31-1103380334

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.