ಕಲಬುರಗಿ: ‘ಭಾರತಕ್ಕೆ ಇಂದು ಬರೀ ಜ್ಞಾನವನ್ನು ಬಳಸುವ ಗ್ರಾಹಕರು ಬೇಕಿಲ್ಲ; ದೇಶಕ್ಕೆ ಜ್ಞಾನವನ್ನು ಸೃಷ್ಟಿಸುವವರ ಅಗತ್ಯವಿದೆ’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎ.ಎಚ್.ರಾಜಾಸಾಬ್ ಪ್ರತಿಪಾದಿಸಿದರು.

ನಗರದ ಅಲ್-ಬದರ್ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದಿಂದ ಇಂಡಿಯನ್ ಅಕಾ ಡೆಮಿ ಆಫ್ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ಕರ್ನಾಟಕ ಘಟಕದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆರಂಭ ವಾದ ಎರಡು ದಿನಗಳ 5ನೇ ಐಎಒಎಂಆರ್ ಕರ್ನಾಟಕ ರಾಜ್ಯ ಮಟ್ಟದ ಪದವಿ (ಯುಜಿ) ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಕೃತಕ ಬುದ್ಧಿಮತ್ತೆಯು (ಎಐ) ಆರೋಗ್ಯ ಕ್ಷೇತ್ರ ಹಾಗೂ ದಂತವೈದ್ಯಶಾಸ್ತ್ರವನ್ನು ಕ್ಷಿಪ್ರವಾಗಿ ಬದಲಾಯಿಸುತ್ತಿದೆ. ರೋಗ ನಿರ್ಣಯ ಚಿತ್ರಣ, ಚಿಕಿತ್ಸೆಯ ಯೋಜನೆ, ರೋಗಿಯ ದತ್ತಾಂಶ ವಿಶ್ಲೇಷಣೆ, ಬಾಯಿ ರೋಗಗಳ ಗುರುತಿಸುವಿಕೆಯಂಥ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ ನೆರವಾಗಬಲ್ಲದು. ಹೀಗಾಗಿ ಈ ಕ್ಷೇತ್ರದ ವಿದ್ಯಾರ್ಥಿಗಳು, ಬೋಧಕರು ಅಂತರಶಿಸ್ತೀಯ ಕಲಿಕಾ ಮನಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜ್ಞಾನವು ವೃತ್ತಿಪರತೆ ನೀಡಿದರೆ, ಚಾರಿತ್ರ್ಯದಿಂದ ಗೌರವ ದೊರೆಯುತ್ತದೆ. ಸೇವೆಯಿಂದ ಬದುಕಿಗೆ ಧ್ಯೇಯ ಸಿಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಬರೀ ಪ್ರಬಂಧ ಮಂಡಿಸಲು ಸಂಶೋಧನೆ ನಡೆಸಬಾರದು. ಸಮಾಜ ಹಾಗೂ ರೋಗಿಗಳು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಗುರುತಿಸಬೇಕು. ಸಮಸ್ಯೆಗಳಿಗೆ ಪರಿಹಾರ ಸೂಚಿಸಿದಾಗಲೇ ಅದು ಅರ್ಥಪೂರ್ಣ ಸಂಶೋಧನೆ ಎನಿಸಿಕೊಳ್ಳುತ್ತದೆ’ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಉಮೇಶ ಎಸ್.ಆರ್. ಮಾತನಾಡಿ, ‘ವೈದ್ಯಕೀಯ ಪದವಿ ಬರೀ ಒಂದು ಪ್ರಮಾಣಪತ್ರವಲ್ಲ; ಅದು ಮಾನವಕುಲಕ್ಕೆ ಸೇವೆ ಸಲ್ಲಿಸುವ ಪವಿತ್ರ ಜವಾಬ್ದಾರಿ. ನಿಮ್ಮ ಚಿಕಿತ್ಸೆಯು ಕೇವಲ ವಿಜ್ಞಾನದ ಆಧಾರದಲ್ಲಿ ಇರದೇ, ಸಹಾನುಭೂತಿ, ನೈತಿಕತೆ ಮತ್ತು ಶ್ರೇಷ್ಠತೆಯಿಂದ ಕೂಡಿರಬೇಕು’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಡಾ.ಎಂ.ಎ.ಮುಜೀಬ್ ಮಾತನಾಡಿ, ‘ಈ ಸಮ್ಮೇಳನಕ್ಕೆ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ 18 ಕಾಲೇಜುಗಳಿಂದ 482 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಈ ಸಮ್ಮೇಳನದಲ್ಲಿ 253 ವೈಜ್ಞಾನಿಕ ಪ್ರಬಂಧಗಳ ಮಂಡನೆ ನಡೆಯಲಿದೆ. ಏಳು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ಮೂರು ಕಾರ್ಯಾಗಾರಗಳು ನಡೆಯಲಿವೆ’ ಎಂದರು.

ಪ್ರಾಚಾರ್ಯ ಸೈಯದ್ ಝಕಾವುಲ್ಲಾ, ಉಪ ಪ್ರಾಂಶುಪಾಲ ಅರ್ಷದ್ ಹುಸೇನ್, ಸಂಘಟನಾ ಕಾರ್ಯದರ್ಶಿ ಸೈಯೀದಾ ಅರ್ಷಿಯಾ ಅರಾ, ಶಿವು ಎಂ.ಇ., ರಘುನಂದ ಶಿಂದೆ, ಸೌಮ್ಯಾ ಕೃಷ್ಣ, ರಾಮಮೂರ್ತಿ ಟಿ.ಕೆ., ಮಹೇಶ ಡಿ.ಕೆ, ಪ್ರೀತಿ, ಪ್ರತಿಭಾ, ಜಯಪ್ರಸಾದ ಆನೇಕರ್, ಪ್ರವೀಣ ರಾಮದುರ್ಗ, ಶಿಲ್ಪಾ ಪಾಟೀಲ ಹಾಗೂ ಎಲ್ಲಾ ಬೋಧಕರು ಮತ್ತು ವಿದ್ಯಾರ್ಥಿಗಳಿದ್ದರು. ಅಮೀನಾ ಸುಲ್ತಾನಾ ಮತ್ತು ಕಿರಣ್ ಘಡೋಳೆ ನಿರೂಪಿಸಿದರು. ಹುಮೇರಾ ಐಷಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-34-1372487782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.