ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೊಡದೂರ ಗ್ರಾಮದ ಕಂಠಿಬಸವೇಶ್ವರ ಜಾತ್ರೆ ಹಾಗೂ ಮರಗಮ್ಮ ದೇವಿ ಕಾರ್ಯದ ಅಂಗವಾಗಿ ಏಪ್ರಿಲ್ 18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಂಠಿಬಸವೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಭೀಮಾಶಂಕರ ಮಾಲಿಪಾಟೀಲ ಹೇಳಿದರು.

‘ಏಪ್ರಿಲ್ 21ರಂದು ಬೆಳಿಗ್ಗೆ 7 ಗಂಟೆ ಕಂಠಿಬಸವೇಶ್ವರ ದೇವರಿಗೆ ರುದ್ರಾಭಿಷೇಕ ನಡೆಯಲಿದೆ. ಬಳಿಕ ಎಲೆ ಪೂಜೆ, ಉಡಿ ತುಂಬುವ ಕಾರ್ಯಕ್ರಮ ಜರುಲಿವೆ. ಬೆಳಿಗ್ಗೆ 11.30ರಿಂದ ಸಂಜ 6 ಗಂಟೆ ತನಕ ಅನ್ನದಾಸೋಹ ನಡೆಯಲಿದೆ’ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಏಪ್ರಿಲ್ 22ರಂದು ಬೆಳಿಗ್ಗೆ 9.30ಕ್ಕೆ ಪುರವಂತರ ಸೇವೆ ಹಾಗೂ ಅಗ್ನಿ ಪ್ರವೇಶ ನಡೆಯಲಿದೆ. ಸಂಜೆ 6.30ಕ್ಕೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ನಂತರ ಪೂರ್ಣಕುಂಭ ಮೆರವಣಿಗೆಯೊಂದಿಗೆ ರಥೋತ್ಸವ ನಡೆಯಲಿದೆ’ ಎಂದರು.

‘ಏಪ್ರಿಲ್ 23ರಂದು ಬೆಳಿಗ್ಗೆ 10 ಗಂಟೆ ಮರಗಮ್ಮ ದೇವಿ ನೂತನ ಸ್ವಾಗತ ಕಮಾನು ಉದ್ಘಾಟನೆ ನಡೆಯಲಿದೆ. ಮೈಸೂರು ಹಾಗೂ ಕೋಡ್ಲಾದ ಜ್ಞಾನ ಪ್ರಕಾಶ ಸ್ವಾಮೀಜಿ ಉದ್ಘಾಟಿಸುವರು. ಸಂಜೆ 6 ಗಂಟೆಗೆ ಮರಗಮ್ಮ ದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಏಪ್ರಿಲ್ 24ರಂದು ಮರಗಮ್ಮ ದೇವಿಯ ಉಡಿ ತುಂಬುವ ಹಾಗೂ ನೈವೇದ್ಯ ನೀಡುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಜಂಗಿ ಕುಸ್ತಿಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮರಗಮ್ಮ ದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ನಾಗರಾಜ ಚಿನ್ನ, ಮುಖಂಡರಾದ ಸಿದ್ದಣಗೌಡ ಪೊಲೀಸ್ಪಾಟೀಲ, ಗಣಪತಿ, ಶರಣು ಚಂದ, ರಮೇಶ ಜನಗೊಂಡ, ನಾಗರಾಜ ಚಿಂದಿ, ಶರಣು ಮಜಗಿ, ಅವಿನಾಶ ಮೂಲಿಮನಿ, ನಾಗೇಂದ್ರ ಪೆಚ್ಚಟ್ಟಿ, ಆನಂದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-34-675849236

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.