ಕಮಲಾಪುರ: ತಾಲ್ಲೂಕಿನ ಕುರಿಕೋಟಾ ಹಳೆ ಸೇತುವೆ ಮೇಲಿಂದ ಬೆಣ್ಣೆತೊರೆ ಹಿನ್ನೀರಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಮೃತದೇಹ ಪತ್ತೆಯಾಗಿದೆ.

ಶಹಾಬಾದ್ ತಾಲ್ಲೂಕಿನ ನಂದೂರ ಗ್ರಾಮದ ಅಮರನಾಥ ನಿಂಗಪ್ಪ ದೊಡ್ಡಮನಿ (30) ಮೃತ ವ್ಯಕ್ತಿ.

ಟೀ ಸ್ಟಾಲ್ ನಡೆಸುತ್ತಿದ್ದ ಅಮರನಾಥ ಅವರು ಕಳೆದ ಕೆಲ ದಿನಗಳ ಹಿಂದೆ ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡಿದ್ದರು. ಆಸ್ಪತ್ರೆ ವೆಚ್ಚಕ್ಕಾಗಿ ಸಾಲ ಮಾಡಿದ್ದರು. ಕಳೆದ ಮೇ 8ರಂದು ಸಂಜೆ ಮನೆಯಿಂದ ಹೊರ ಬಂದಿದ್ದರು. ಅಂದು ರಾತ್ರಿಯೇ ಕುರಿಕೋಟಾ ಹಳೆ ಸೇತುವೆ ಮೇಲೆ ಬೈಕ್ ನಿಲ್ಲಿಸಿ ನೀರಿಗೆ ಹಾರಿದ್ದಾರೆ.

ಅಮರನಾಥ ನಾಪತ್ತೆಯಾದಾಗ ಮನೆಯವರು ಫೋನ್ ಮಾಡಿದ್ದು, ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಸೇತುವೆ ಬಳಿ ಶನಿವಾರ ಬೆಳಿಗ್ಗೆ ಬೈಕ್ ಪತ್ತೆಯಾಗಿರುವುದರಿಂದ ನೀರಲ್ಲಿ ಬಿದ್ದಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು.

ಅಗ್ನಿಶಾಮಕ ದಳ ಸಿಬ್ಬಂದಿ ಶನಿವಾರ ನಿರಂತರ ಕಾರ್ಯಾಚರಣೆ ನಡೆಸಿದ್ದರೂ ಅಮರನಾಥ ಪತ್ತೆಯಾಗಿರಲಿಲ್ಲ. ಭಾನುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಪಿಎಸ್ಐ ಬಸವರಾಜ ಚಿತ್ತಕೋಟೆ, ಸಿಬ್ಬಂದಿ ಸೋಮನಾಥ, ಕಿಶನ ಜಾಧವ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-34-1276044271

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.