ಕಲಬುರಗಿ: ನಗರದ ನೀರು ಸರಬರಾಜು, ಪೌರಕಾರ್ಮಿಕ ಹಾಗೂ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ಕಾರ್ಮಿಕರ ದಿನ ಆಚರಿಸಲಾಯಿತು.

ಜಿಲ್ಲಾ ಕಾರ್ಮಿಕ ಮುಖಂಡ ಸುನಿಲ ಮಾನಪಡೆ ಮಾತನಾಡಿ, ‘ಕಾರ್ಮಿಕರ ಕನಿಷ್ಠ ವೇತನವನ್ನು ₹35 ಸಾವಿರಕ್ಕೆ ನಿಗದಿಪಡಿಸಬೇಕು. ಹೊಸ ಕಾರ್ಮಿಕ ಕಾಯ್ದೆಗಳಡಿ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವುದು, 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಂಪನಿಗಳು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ತೆಗೆದುಹಾಕುವ ಅವಕಾಶ, ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ನಿರ್ಬಂಧ, ಹೆಚ್ಚಿನ ಪಿಎಫ್ ಕಡಿತ ಹಾಗೂ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ನೇಮಿಸುವಂತಹ ನೀತಿಗಳು ಕಾರ್ಮಿಕರ ಶೋಷಣೆಗೆ ಕಾರಣವಾಗಲಿವೆ. ಆದ್ದರಿಂದ ಸಂಘಟಿತ ಹೋರಾಟ ಅನಿವಾರ್ಯ’ ಎಂದುರು.

ಚಂದು ಜಾಧವ ಕಾರ್ಮಿಕರ ದಿನಾಚರಣೆ ಮಹತ್ವ ವಿವರಿಸಿದರು.

ಹಿರಿಯ ಮುಖಂಡ ನಾರಾಯಣ ರಂಗದಾಳ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಟ್ರೇಡ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಅಶೋಕ ಘೊಳಿ, ಅನಿಲ್ ಕುಮಾರ ಮಂಗಾ, ಮೈಲಾರಿ ದೊಡ್ಡಮನಿ, ಜಗನ್ನಾಥ, ಮಲ್ಲಿನಾಥ, ಪ್ರಕಾಶ ಬೆಳಗುಂಪಿ, ಸರಸ್ವತಿ ಮಠ, ಬಸಮ್ಮ, ತಾವರು ರಾಠೋಡ್, ಲತಾ ಮಾಂಗೇಶಕರ್, ಕಂಠಮ್ಮ, ಗೀತಾಬಾಯಿ, ಯುನೂಸ್ ಹಜಾರೆ, ಸಮೀರ್ ಪಾಶಾ, ಕಾಂತು ಸಿಂಗೆ, ಶಿವಕುಮಾರ ಬಬಲಾದಕರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-34-489457277

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.