ಕಲಬುರಗಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಯೋಜನೆಯ ಹಂತ–1ರಲ್ಲಿ 30x40 ನಿವೇಶನ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ₹35 ಲಕ್ಷ ವಂಚಿಸಿದ ಆರೋಪದಡಿ ತಾಯಿ–ಮಗನ ವಿರುದ್ಧ ಚೌಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಗರದ ಮುಸ್ಲಿಂ ಚೌಕನ ಮೋಮಿನಪುರದ ಬಟ್ಟೆ ವ್ಯಾಪಾರಿ ನಸೀರುದ್ದೀನ್ ಸತ್ತಾರ ವಂಚನೆಗೆ ಒಳಗಾದವರು.

‘ಸೈಯದ್ ಫಾರೂಕ್ ಹಾಗೂ ಅವರ ತಾಯಿ ಶಮೀಮ್ಬಾನು 15 ವರ್ಷಗಳಿಂದ ಪರಿಚಯ. 2023ರ ಅಕ್ಟೋಬರ್ 20ರಂದು ನಮ್ಮ ಮನೆಗೆ ಬಂದಾಗ ಕಲಬುರಗಿ ಜಿಡಿಎದಲ್ಲಿ ಅಧಿಕಾರಿಗಳ ಪರಿಚಯವಿದ್ದು, ಪಟೇಲ್ ಯೋಜನೆಯ ಹಂತ –1ರಲ್ಲಿ ₹35 ಲಕ್ಷಕ್ಕೆ 30x40 ನಿವೇಶನ ಕೊಡಿಸುವುದಾಗಿ ನಂಬಿಸಿದ್ದರು. ಬಳಿಕ ಹಂತ ಹಂತವಾಗಿ ಚೆಕ್ ಹಾಗೂ ಆರ್ಟಿಜಿಎಸ್ ಮೂಲಕ ₹35 ಲಕ್ಷ ಹಣ ಕೊಟ್ಟಿದ್ದೆ. ಆದರೆ ನಿವೇಶನಕ್ಕಾಗಿ ಕಾಯುತ್ತಿದ್ದೆ. ತಾಯಿ–ಮಗ ಇಬ್ಬರೂ ನಿವೇಶನ ತೋರಿಸದೇ ಕಾಲಹರಣ ಮಾಡುತ್ತಿದ್ದರು. ನಾನೇ ಜಿಡಿಎಗೆ ಹೋಗಿ ವಿಚಾರಿಸಿದಾಗ ಅಂಥ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೀಗಾಗಿ ನಿವೇಶನ ಕೊಡಿಸುವುದಾಗಿ ₹35 ಲಕ್ಷ ಹಣ ಪಡೆದು ಮೋಸ ಮಾಡಿದ ಇಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಸೀರುದ್ದೀನ್ ಸತ್ತಾರ ಒತ್ತಾಯಿಸಿದ್ದಾರೆ.

ಈ ದೂರಿನನ್ವಯ ಸೈಯದ್ ಫಾರೂಕ್ ಹಾಗೂ ಅವರ ತಾಯಿ ಶಮೀಮ್ಬಾನು ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

9 ಎಮ್ಮೆ ಹಾಗೂ 10 ಕರುಗಳ ರಕ್ಷಣೆ

ಕಲಬುರಗಿ: ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 9 ಎಮ್ಮೆ ಹಾಗೂ 10 ಎಮ್ಮೆ ಕರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಜಾನುವಾರುಗಳ ಸಾಗಣೆ ಬಳಸಿದ್ದ ₹5 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ. ದನಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.

ಜಾನುವಾರುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ವಾಹನದ ಚಾಲಕ ಹಾಗೂ ದನಗಳ ಮಾಲೀಕನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 ಮಂದಿ ವಿರುದ್ಧ ಕ್ರಮ

ಕಲಬುರಗಿ: ನಗರದ ಹೊರವಲಯದ ಹಾಗರಗಾದಿಂದ ಭೂಪಾಲ ತೆಗನೂರ ಗ್ರಾಮದತ್ತ ಹೋಗುವ ದಾರಿಯಲ್ಲಿ ಇಸ್ಫೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿರುವ ಪೊಲೀಸರು, 8 ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಬಂಧಿತ ಆರೋಪಿಗಳಿಂದ ಜೂಜಾಟದ ಪಣಕ್ಕೆ ಹಚ್ಚಿದ್ದ ₹2,540 ಸೇರಿದಂತೆ ಒಟ್ಟು ₹11,940 ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-34-1711811831

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.