ಅಫಜಲಪುರ: ಕಲಬುರಗಿ ನಗರದಲ್ಲಿ ವಕೀಲ ಅನೀಲ ರಾಠೋಡ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘದಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ, ‘ದೇಶಾದ್ಯಂತ ವಕೀಲರ ಮೇಲೆ ಹಲ್ಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ವಕೀಲರ ಭದ್ರತೆಗಾಗಿ ವಿಶೇಷ ಕಾಯ್ದೆ ಜಾರಿಗೆ ತರಬೇಕು. ಅನೀಲ ರಾಠೋಡ ಅವರ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ತ್ವರಿತಗೊಳಿಸಬೇಕು. ಅಪರಾಧಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ಹಿರಿಯ ವಕೀಲ ಕೆ.ಜಿ.ಪೂಜಾರಿ ಮಾತನಾಡಿ, ‘ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕೀಲರಿಗೆ ಭದ್ರತೆ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ನಂತರ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಕೀಲರಾದ ಎಸ್.ಜಿ.ಹುಲ್ಲೂರ, ಕೆ.ಡಿ.ಪಟೇಲ, ವಾಸೀಂ ಜಾಗೀರದಾರ, ಅನೀತಾ ದೊಡ್ಮನಿ, ಎಂ.ಎಸ್.ಪಾಟೀಲ, ಅರ್ಜುನ ಕೆರೂರ, ಸಿ.ಎಸ್.ಹಿರೇಮಠ, ಎಸ್.ಟಿ.ರಾಠೋಡ, ಸುರೇಶ ಅವಟೆ, ಅನೀಲ ಜಮಾದಾರ, ಸುಪ್ರೀಯಾ ಅಂಕಲಗಿ, ಸಂತೋಷ ಸೇಜೋಳೆ, ಮಂಜುನಾಥ ಧರಿಗೊಂಡ, ರಾಮು ಸುತಾರ, ಸಿದ್ದು ಇಸ್ಪೂರ, ರಾಜಾಬಾಸ್ಕರ, ರೇವೂಬಾಯಿ ಸೆರಿದಂತೆ ಮತ್ತಿರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.