ಕಲಬುರಗಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳು ಮತ್ತು 5 ಕೆಜಿ ಸಿಲಿಂಡರ್ಗಳ ಬೆಲೆಯಲ್ಲಿ ತೀವ್ರ ಏರಿಕೆಯನ್ನು ಮಾಡಿರುವುದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ‘ವಾಣಿಜ್ಯ ಸಿಲಿಂಡರ್ ದರಗಳಲ್ಲಿ ಸುಮಾರು ಒಂದು ಸಾವಿರ ರೂಪಾಯಿಗಳಷ್ಟು ತೀವ್ರ ಏರಿಕೆ ಮಾಡಿದ್ದರಿಂದ ಬೇರೆಲ್ಲ ಸಾಮಗ್ರಿಗಳ ಬೆಲೆಗಳು ತೀವ್ರವಾಗಿ ಏರುತ್ತವೆ. ವಾಣಿಜ್ಯ ಸಂಸ್ಥೆಗಳು ಹೊರೆಗಳನ್ನು ಗ್ರಾಹಕರ ಮೇಲೆ ದಾಟಿಸುತ್ತವೆ. ಇದು ಅವರ ಹೊರೆಗಳು ಮತ್ತು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಸಣ್ಣ ಸಂಸ್ಥೆಗಳು ಮುಚ್ಚುವಂತಾಗುತ್ತದೆ. ಇದು ಈಗಾಗಲೇ ನಡೆಯುತ್ತಿರುವ ಲೇ-ಆಫ್ಗಳು ಮತ್ತು ಗಮನಾರ್ಹ ಉದ್ಯೋಗ ನಷ್ಟಗಳಿಗೆ ಕಾರಣವಾಗುತ್ತದೆ’ ಎಂದಿದ್ದಾರೆ.

‘14 ಕೆಜಿ ಗೃಹಬಳಕೆಯ ಸಿಲಿಂಡರ್ಗಳನ್ನು ಸದ್ಯಕ್ಕೆ ಬಿಡಲಾಗಿದ್ದರೂ, 5 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ಗಳ ಬೆಲೆಯನ್ನು ₹ 261ರಷ್ಟು ತೀವ್ರವಾಗಿ ಹೆಚ್ಚಿಸಲಾಗಿದೆ. 5 ಕೆಜಿ ಸಿಲಿಂಡರ್ಗಳ ಬೆಲೆಯ ಈ ಕ್ರೂರ ಏರಿಕೆಯು 14 ಕೆಜಿ ಸಿಲಿಂಡರ್ಗಳನ್ನು ಪಡೆಯಲು ಸಾಧ್ಯವಾಗದ ಸಣ್ಣ ಮನೆಗಳು ಮತ್ತು ವಲಸೆ ಕಾರ್ಮಿಕರ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುತ್ತದೆ. ಕಳೆದ ಎರಡು ತಿಂಗಳಲ್ಲಿ ಮೋದಿ ಸರ್ಕಾರವು ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಇಂತಹ ಎರಡನೇ ಬಾರಿ ಏರಿಕೆ ಮಾಡಿದೆ. ಸರ್ಕಾರವು ಎಲ್ಜಿಪಿ ಸಿಲಿಂಡರ್ಗಳ ಮೇಲಿನ ತೆರಿಗೆಗಳಿಂದ ಬರುವ ಆದಾಯವನ್ನು ಬಿಟ್ಟು ಕೊಡಲು ಸಿದ್ಧವಾಗಿದ್ದರೆ, ಸಾಮಾನ್ಯ ಜನರಿಗೆ ನಿರಾಳತೆ ಒದಗಿಸಬಹುದಿತ್ತು. ಆದರೆ ಅದಕ್ಕೆ ತೆರಿಗೆ ಹಿಂದಕ್ಕೆ ಪಡೆಯುವ ನಿರ್ಧಾರ ಕೈಬಿಟ್ಟ ಸರ್ಕಾರ ಬೆಲೆ ಹೆಚ್ಚಳದ ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-34-773758786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.