ಕಲಬುರಗಿ: ‘ಮಾದಿಗ ಸಮುದಾಯದವರಿಗೆ ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಆಗಿದ್ದು, ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ದಶರಥ ಕಲಗುರ್ತಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಮಲಾಪುರದಲ್ಲಿ ಈಚೆಗೆ ಸಂಸದ ಗೋವಿಂದ ಕಾರಜೋಳ ಅವರು ನ್ಯಾ.ಸದಾಶಿವ ಆಯೋಗ, ಮಾದುಸ್ವಾಮಿ ಆಯೋಗ, ನ್ಯಾ.ನಾಗಮೋಹನದಾಸ್ ವರದಿ ಪ್ರಕಾರ ಸರ್ಕಾರ ಮಾದಿಗರಿಗೆ ಶೇ 6ರಷ್ಟು ಒಳಮೀಸಲಾತಿ ಕೊಡಬೇಕಿತ್ತು. ಕೇವಲ ಶೇ 5.25 ಒಳಮೀಸಲಾತಿ ನೀಡುವ ಮೂಲಕ ನಮ್ಮ ಸಮುದಾಯದ ಮಕ್ಕಳು ‘ಡಿ’ ದರ್ಜೆ ನೌಕರಿ, ಕಾನ್ಸ್ಟೆಬಲ್, ಶಿಕ್ಷಕರ ಹುದ್ದೆಗೆ ಮಾತ್ರ ನೇಮಕವಾಗುವಂತೆ ಮಾಡಿದೆ. ನಮ್ಮವರು ಡಿಸಿ, ಎಸಿ, ಎಸ್ಪಿ ಸೇರಿ ಕ್ಲಾಸ್–1 ಅಧಿಕಾರಿಗಳಾಗಲು ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದು ಕರೆ ನೀಡಿದ್ದರು’ ಎಂದರು.

‘ಆದರೆ, ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಅವರು ಮಾದಿಗ ಸಮುದಾಯಕ್ಕೆ ಅನ್ಯಾಯ ಆಗುತ್ತಿರುವುದನ್ನು ಮರೆತು, ಗೋವಿಂದ ಕಾರಜೋಳ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ. ತಾರಫೈಲ್ ಅವರು ಪಕ್ಷದಲ್ಲಿ ಸ್ಥಾನ ಪಡೆಯಲು ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಶೇ 5.25ರಷ್ಟು ಒಳಮೀಸಲಾತಿ ಜಾರಿ ದಿನವೂ ವಿಜಯೋತ್ಸವ ಆಚರಿಸಿದ್ದರು. ಅವರಿಗೆ ಸಮುದಾಯಕ್ಕಿಂತ ಪಕ್ಷ ಮುಖ್ಯವಾಗಿದೆ’ ಎಂದು ಆರೋಪಿಸಿದರು.

‘ಮೂರಕ್ಕಿಂತ ಕಡಿಮೆ ಹುದ್ದೆಗಳಿದ್ದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದ್ದು, ಉಳಿದ ಅಭ್ಯರ್ಥಿಗಳೊಂದಿಗೆ ಪೈಪೋಟಿ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಒಳಮೀಸಲಾತಿ ಅಗತ್ಯವಿದೆ. ರೋಸ್ಟರ್ ಬಿಂದು ತಾರತಮ್ಯ ಕೂಡ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಸಮಾಜದ ಮುಖಂಡ ರಾಜು ವಾಡೇಕರ ಮಾತನಾಡಿ, ‘ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಮಾದಿಗ ಸಮುದಾಯಕ್ಕೆ ಎಂಎಲ್ಎ ಟಿಕೆಟ್ ತಪ್ಪಿದಾಗ ಲಿಂಗರಾಜ ತಾರಫೈಲ್ ಯಾಕೆ ಧ್ವನಿ ಎತ್ತಲಿಲ್ಲ’ ಎಂದು ಪ್ರಶ್ನಿಸಿದರು.

ಸಮಾಜದ ಮುಖಂಡ ಮಂಜುನಾಥ ನಾಲವಾರಕರ್ ಮಾತನಾಡಿ, ‘ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಮಾದಿಗ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದೆ. ಇದನ್ನು ವಿರೋಧಿಸಲು ದೊಡ್ಡಮಟ್ಟದ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ’ ಎಂದರು.

ರಾಜು ಕಟ್ಟಿಮನಿ, ಅನೀಲ ಡೊಂಗರಗಾಂವ, ಪ್ರದೀಪ ಭಾವೆ, ಗುಂಡು, ಅರವಿಂದ ನಾಟೀಕಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-34-706794335

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.