ಕಲಬುರಗಿ: ಕಲಬುರಗಿ ಮಾರುಕಟ್ಟೆಯಲ್ಲಿ ಮಾವಿನ ಘಮಲು ಹರಡಿದೆ. ಆಲ್ಫಾನ್ಸೋ(ಆಪೂಸ್), ಬೆನಿಶಾನ್ (ಬಂಗನಪಲ್ಲಿ), ದಶೇರಿ, ಕೇಸರ್, ತೋತಾಪುರಿ, ಮಲೈಕಾ, ಮಲಗೋವಾ, ಸ್ಥಳೀಯ ‘ಜವಾರಿ’ ತಳಿಯ ಹಣ್ಣುಗಳು ಕಲಬುರಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ತಾಜ್ ಸುಲ್ತಾನ್ಪುರ, ಸೂಪರ್ ಮಾರ್ಕೆಟ್, ಕಣ್ಣಿ ಮಾರುಕಟ್ಟೆ, ರಾಮ ಮಂದಿರ ವೃತ್ತ, ಖರ್ಗೆ ಪೆಟ್ರೋಲ್ ಬಂಕ್ ವೃತ್ತ, ಹುಮನಾಬಾದ್ ವೃತ್ತ ಸೇರಿದಂತೆ ನಗರದ ಎಲ್ಲೆಲ್ಲೂ ಮಾವಿನ ವಹಿವಾಟು ಜೋರಾಗಿದೆ. ತಳ್ಳು ಬಂಡಿ, ಜ್ಯೂಸ್ ಸೆಂಟರ್, ಹಣ್ಣುಗಳ ಅಂಗಡಿಯಲ್ಲಿ ‘ಹಣ್ಣುಗಳ ರಾಜ’ ಮಾವು ‘ಕಾರುಬಾರು’ ನಡೆಸುತ್ತಿದೆ. ನೋಡುಗರ ಬಾಯಲ್ಲಿ ನೀರೂರಿಸುತ್ತಿವೆ.

ಕೇಸರ್ ತನ್ನ ಬಣ್ಣದಿಂದಲೇ ಗ್ರಾಹಕರನ್ನು ಸೆಳೆದು ವಹಿವಾಟು ಕುದುರಿಸುತ್ತಿದೆ. ಹಸಿ–ಹಸಿಯಂತೆ ಕಂಡರೂ ದಶೇರಿ ಸುವಾಸನೆಯಿಂದ ಬಿಕರಿಯಾಗುತ್ತಿದೆ. ದೊಡ್ಡ ಗಾತ್ರ ಹಾಗೂ ಹಳದಿ ವರ್ಣದಿಂದಲೇ ಬೆನಿಶಾನ್ ತನ್ನದೇಯಾದ ಮಾರುಕಟ್ಟೆ ಗಿಟ್ಟಿಸುತ್ತಿದೆ.

‘ತೆಲಂಗಾಣದ ಜಹೀರಾಬಾದ್ ಪ್ರದೇಶ, ಹೈದರಾಬಾದ್ ಮಾರುಕಟ್ಟೆಗಳಿಂದ ದಶೇರಿ ಕಲಬುರಗಿ ಪ್ರವೇಶಿಸುತ್ತಿದೆ. ಬೆನಿಶಾನ್ ಕೂಡ ಹೈದರಾಬಾದ್ನಿಂದಲೇ ಹೆಚ್ಚಾಗಿ ಆವಕವಾಗುತ್ತಿದೆ. ಮಲೈಕಾ ಸ್ಥಳೀಯ ಮಾರುಕಟ್ಟೆಯಿಂದ ಸಿಗುತ್ತಿದೆ. ಆಪೂಸ್ ಹಣ್ಣು ಮಹಾರಾಷ್ಟ್ರದ ರತ್ನಗಿರಿ, ದೇವಗಡ ಭಾಗದಿಂದ ಬರುತ್ತಿದೆ’ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಾರೆ.

‘ಮಾವಿನಲ್ಲಿ ಹಲವು ಬಗೆ ಇವೆ. ಗಾತ್ರ, ತಳಿ, ರುಚಿಗೆ ತಕ್ಕಂತೆ ದರವಿದೆ. ‘ಉಳ್ಳವರ ಹಣ್ಣು’ ಎಂದೇ ಖ್ಯಾತವಾದ ಆಪೂಸ್ ಪ್ರತಿ ಡಜನ್ಗೆ ₹600ರಿಂದ ₹800 ತನಕ ಬಿಕರಿಯಾಗುತ್ತಿದೆ. ಮಧ್ಯಮ ವರ್ಗದ ನೆಚ್ಚಿನ ಹಣ್ಣು ಎನಿಸಿರುವ ದಶೇರಿಯು ಪ್ರತಿ ಕೆ.ಜಿಗೆ ₹100ರಿಂದ ₹140 ತನಕ ಮಾರಾಟವಾಗುತ್ತಿದೆ. ಬಡವರ ಹಣ್ಣು ಎನ್ನಲಾಗುವ ಬೆನಿಶಾನ್ ಪ್ರತಿ ಕೆ.ಜಿಗೆ ₹50ರಿಂದ ₹100 ತನಕ ವಹಿವಾಟು ನಡೆಯುತ್ತಿದೆ. ಇನ್ನುಳಿದಂತೆ ವಿಶಿಷ್ಟ ರುಚಿಗೆ ಹೆಸರಾದ ಮಲೈಕಾ ಹಣ್ಣು ಪ್ರತಿ ಕೆ.ಜಿಗೆ ₹140ರಂತೆ ಮಾರಾಟವಾಗುತ್ತಿದೆ. ಸಣ್ಣಗಾತ್ರದ ಲಾಲ್ ಬಹಾರ್ ತಳಿಯ ಮಾವು ಕೆ.ಜಿಗೆ ₹60ರಂತೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ 20 ವರ್ಷಗಳಿಂದ ಹಣ್ಣಿನ ವ್ಯಾಪಾರ ನಡೆಸುತ್ತಿರುವ ಆಸೀಫ್ ಇಕ್ಬಾಲ್.

‘ಮಾವಿನ ಹಣ್ಣಿನ ಸೀಸನ್ ಈ ಸಲ ಒಂದು ತಿಂಗಳಷ್ಟು ತಡವಾಗಿ ಆರಂಭವಾಗಿದೆ. ಜುಲೈ ಮಧ್ಯಭಾಗದ ತನಕ ಈ ಸಲ ಮಾವು ಮಾರುಕಟ್ಟೆಯಲ್ಲಿ ಸಿಗುವ ನಿರೀಕ್ಷೆಗಳಿವೆ. ಇನ್ನೂ ಹಲವು ತಳಿಗಳ ಮಾವು ಮಾರುಕಟ್ಟೆಗೆ ಬರಬೇಕಿದೆ. ಮಾವಿನ ಸೀಸನ್ನ ಕೊನೆಯ ಅವಧಿಯಲ್ಲಿ ಪೈರಿ, ಚೌಂಸಾ, ಲಂಗ್ರಾದಂಥ ತಳಿಗಳು ಬರಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಉತ್ತಮ ಇಳುವರಿ ಇದೆ. ಹೀಗಾಗಿ ಸ್ಪರ್ಧಾತ್ಮಕ ದರಗಳು ಕಾಣುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ಇಳಿದ ದರಗಳು: ‘20 ದಿನಗಳ ಹಿಂದೆ ಮಾವಿನ ದರಗಳು ಚೆನ್ನಾಗಿದ್ದವು. ಈಗ ಬೆಲೆ ಕುಸಿದಿದೆ. ಪ್ರತಿ ಕೆ.ಜಿ. ಬೆನಿಶಾನ್ ತಳಿಯ ಮಾವು ಸೀಸನ್ ಆರಂಭದಲ್ಲಿ ₹200ರತನಕ ಮಾರಾಟವಾಗಿದೆ. ಇದೀಗ ಉತ್ತಮ ಗುಣಮಟ್ಟದ ಬೆನಿಶಾನ್ ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. ಮಧ್ಯಮ ಗುಣಮಟ್ಟದ ಮಾವು ₹100ಗೆ ಎರಡು ಕೆ.ಜಿಯಂತೆ ಬಿಕರಿಯಾಗುತ್ತಿದೆ. ಪ್ರತಿ ಕೆ.ಜಿಗೆ ₹300ರ ತನಕ ಮಾರಾಟವಾಗಿದ್ದ ಕೇಸರ್ ಇದೀಗ ₹150ರಂತೆ ಮಾರಾಟವಾಗುತ್ತಿದೆ. ಪ್ರತಿ ಕೆ.ಜಿಗೆ ₹200ರಂತೆ ಬಿಕರಿಯಾಗಿದ್ದ ದಶೇರಿ ದರ ಈಗ ₹120ಕ್ಕೆ ತಗ್ಗಿದೆ’ ಎಂದು ಸೂಪರ್ ಮಾರುಕಟ್ಟೆಯ ಮಾವು ವ್ಯಾಪಾರಿ ಉಮರ್ ಫಾರೂಕ್ ಹಿಪ್ಪರಗಾ ಹೇಳುತ್ತಾರೆ.

ಮಾವಿನ ಸ್ವಾದಕ್ಕೆ ರಾಸಾಯನಿಕಗಳ ಭಯ

ಮೊದಲ ನೋಟದಲ್ಲೇ ಬಾಯಲ್ಲಿ ನೀರೂರಿಸುವ ಸ್ವಾದಿಷ್ಟ ಮಾವು ಚಪ್ಪರಿಸಲು ಜನರಿಗೆ ರಾಸಾಯನಿಕಗಳ ಭಯ ಕಾಡುತ್ತಿದೆ. ಕೆಲವರು ಯಾವುದು ನೈಸರ್ಗಿಕವಾಗಿ ಮಾಗಿಸಿದ ಹಣ್ಣು? ಯಾವುದು ರಾಸಾಯನಿಕ ಬಳಸಿ ಮಾಗಿಸಿದ ಹಣ್ಣು? ಎಂಬ ಭೇದ ಅರಿಯಲು ಸಾಧ್ಯವಾಗದೇ ಗೊಂದಲಕ್ಕೆ ಸಿಲುಕಿದ್ದಾರೆ.

‘ಹಣ್ಣುಗಳನ್ನು ಮಾಗಿಸಲು ಹಿಂದೆಲ್ಲ ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗುತ್ತಿತ್ತು. ಅದು ಆರೋಗ್ಯಕ್ಕೆ ಅಪಾಯಕಾರಿ ಎಂದರಿತ ಸರ್ಕಾರ ಹಲವು ವರ್ಷಗಳ ಹಿಂದೆಯೇ ಅದರ ಬಳಕೆ ನಿಷೇಧಿಸಿದೆ. ಇದೀಗ ಹಣ್ಣುಗಳನ್ನು ಮಾಗಿಸಲು ಇಥೆಲಿನ್ ಸ್ಯಾಚೆಗಳ ಬಳಕೆಗೆ ಅವಕಾಶವಿದೆ’ ಎನ್ನುತ್ತಾರೆ ಕಲಬುರಗಿ ವಿಭಾಗೀಯ ಆಹಾರ ಪ್ರಯೋಗಾಲಯದ ಹಿರಿಯ ಆಹಾರ ವಿಶ್ಲೇಷಕ ಲೋಕೇಶ ಪಿ.

‘ನೈಸರ್ಗಿಕವಾಗಿ ಮಾಗಿದ ಹಣ್ಣು ಹೆಚ್ಚಾಗಿ ಬಣ್ಣ, ಹೊಳಪಿನಿಂದ ಗಮನ ಸೆಳೆಯಲ್ಲ. ಸುವಾಸನೆ, ರುಚಿಯಿಂದ ತನ್ನತನ ಹೇಳುತ್ತದೆ. ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ನೋಡಲು ಸುಂದರ ಕಂಡರೂ, ಬಣ್ಣಕ್ಕೆ ತಕ್ಕಂತೆ ಸುವಾಸನೆ, ರುಚಿ ಹೊಂದಿರುವುದಿಲ್ಲ. ತುಸು ಸಾಮಾನ್ಯ ಪ್ರಜ್ಞೆ ಬಳಸಿದರೆ, ಇದನ್ನು ಸುಲಭಕ್ಕೆ ಪತ್ತೆ ಮಾಡಬಹುದು’ ಎಂಬುದು ಅವರ ಅಂಬೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.