ಕಲಬುರಗಿ: ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಅಪೂರ್ಣ ಮಾಹಿತಿಯೊಂದಿಗೆ ಬಂದ ಮತ್ತು ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳು ಹಾಗೂ ಎಂಜಿನಿಯರ್ಗಳನ್ನು ಶಾಸಕ ಅಲ್ಲಮಪ್ರಭು ಪಾಟೀಲ ತರಾಟೆಗೆ ತೆಗೆದುಕೊಂಡರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬಳಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ಇಲ್ಲದಿರುವುದನ್ನು ಅರಿತ ಶಾಸಕರು, ‘ಪೂರ್ಣ ವರದಿ ಇಲ್ಲದೇ ಮೀಟಿಂಗ್ ಮಾಡುವುದರಲ್ಲಿ ಅರ್ಥ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರೇ ಸ್ಥಳಗಳ ಹೆಸರು, ಮಾಹಿತಿ, ಗುರುತು ಹೇಳುತ್ತಿದ್ದರೆ, ಅಧಿಕಾರಿಗಳು ಹೂ ರೀ ಎಂದು ಗೊಂದಲದಲ್ಲಿ ಹೇಳಿಕೆ ನೀಡುತ್ತಿದ್ದರು.

‘ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿ, ಏಜೆನ್ಸಿಗಳ ಬಗ್ಗೆ ತಿಳಿದುಕೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಬೇಕು. ಸಭೆಯ ಮೊದಲೇ ವರದಿ ನೀಡಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೊದಲಿಗೆ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲಿಸಿದ ಶಾಸಕರು, ‘ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೆಕೆಆರ್ಡಿಬಿ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಭೆಗೆ ಮಾಹಿತಿಯೇ ನೀಡಿಲ್ಲ’ ಎಂದು ಗರಂ ಆದರು.

‘ಉಳಿದ ಕಾಮಗಾರಿಗಳ ವರದಿ ಕೂಡ ಸಭೆಯ ಆರಂಭದಲ್ಲಿ ಕೊಡುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ತಾಲ್ಲೂಕು ಪಂಚಾಯಿತಿ ಇಒ ಎಂ.ಡಿ ಸೈಯದ್ ಪಟೇಲ್ ಅವರು, ‘ಒಂದು ವಾರ ಮೊದಲೇ ಪ್ರಗತಿ ವರದಿ ನೀಡುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಮುಂದುವರಿದು ಶಾಸಕರು, ‘ತಹಶೀಲ್ದಾರ್ ಕಚೇರಿಯಿಂದ ಜನತಾ ಬಜಾರ್ ರಸ್ತೆ ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷ ಆಯ್ತು, ಇನ್ನೂ ಮುಗಿದಿಲ್ಲ. ಎಸ್ಬಿಐನಿಂದ ದತ್ತಮಂದಿರದವರೆಗಿನ ಕಾಮಗಾರಿಗೆ ನಾನೇ ಚಾಲನೆ ನೀಡಿದ್ದೇನೆ. ಅದು 2023ರ ಕಾಮಗಾರಿ, ಇನ್ನೂ ಮುಗಿದಿಲ್ಲ. ಸಂಗಮ್ ಚಿತ್ರಮಂದಿರ ರಸ್ತೆ, ಕೋಟೆವರೆಗೆ ರಸ್ತೆ ಕಾಮಗಾರಿಗಳು ಕುಂಟುತ್ತಾ ಸಾಗಿವೆ’ ಎಂದರು.

‘ಮಾದರಸನಹಳ್ಳಿ–ಹಡಗಿಲ್ ಹಾರುತಿ ರಸ್ತೆ 2022ರ ಕಾಮಗಾರಿ. ಮೂರನೇ ಕೆಡಿಪಿ ಸಭೆಯಲ್ಲೂ ಪ್ರಸ್ತಾಪ ಆಗುತ್ತಿದೆ. ಏನೂ ಪ್ರಗತಿ ಆಗಿಲ್ಲ. ಗುತ್ತಿಗೆದಾರರ ಪರವಾನಗಿ ರದ್ದು ಮಾಡಲು ಶಿಫಾರಸು ಮಾಡಿ’ ಎಂದು ಪಿಡಬ್ಲ್ಯೂಡಿ ಎಇಇ ಉಷಾ ಅವರಿಗೆ ಸೂಚಿಸಿದರು.

‘ಕಣ್ಣಿ ಮುಖ್ಯರಸ್ತೆಯಿಂದ ಜಟ್ಟಿಂಗರಾಯ ದೇವಸ್ಥಾನದವರೆಗೆ ರಸ್ತೆಗೆ ಮುರುಮ್ ಹಾಕಿಲ್ಲ. ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸುಳ್ಳು ಹೇಳಬೇಡಿ’ ಎಂದು ಎಂಜಿನಿಯರ್ ಶಾಂತಕುಮಾರ ಅವರಿಗೆ ತಾಕೀತು ಮಾಡಿದರು.

‘ಕಾಡನಾಳ ಗ್ರಾಮದಲ್ಲಿ ಜಾಗದ ಸಮಸ್ಯೆ ಇದ್ದು, ಇನ್ನೂ ಕಾಮಗಾರಿ ಆರಂಭವಾಗಿಯೇ ಇಲ್ಲ. ಆದರೆ, ಮುಗಿದಿದೆ ಎಂದು ಹೇಳುತ್ತಿದ್ದೀರಿ. ನಾನು ದಿನನಿತ್ಯ ಕ್ಷೇತ್ರದಲ್ಲಿ ತಿರುಗಾಡುತ್ತೇನೆ. ಸುಳ್ಳು ಮಾಹಿತಿ ನೀಡಬೇಡಿ’ ಎಂದು ತಾಕೀತು ಮಾಡಿದರು.

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಪ್ರಗತಿ ಪರಿಶೀಲಿಸಿದ ಶಾಸಕರು, ‘ಸಾವಳಗಿ– ಮೇಳಕುಂದಾ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ವರದಿಯಲ್ಲಿದೆ. ಆದರೆ, ಅಲ್ಲಿ ಕೆಲಸವೇ ನಡೆದಿಲ್ಲ. ನಾವು ಎಲ್ಲಿಂದಲೋ ಅನುದಾನ ತಂದುಹಾಕುತ್ತೇವೆ. ಆದರೆ, ಕಾಮಗಾರಿ ಮಾಡದಿದ್ದರೆ ಹೇಗೆ?’ ಎಂದು ಎಇಇ ಅವರನ್ನು ಕೇಳಿದರು.

‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಪಿಡಿಒಗಳು ಕೆಲಸ ಮಾಡಬೇಕು. ಹಳ್ಳಿಗಳಲ್ಲಿ ಸತತವಾಗಿ ಬೋರ್ವೆಲ್ಗಳು ಚಾಲೂ ಇಡುವುದರಿಂದ ಸುಟ್ಟುಹೋಗುತ್ತಿವೆ. ಹಾಗಾಗಿ, ನೀರು ಸಾಕಾದ ಮೇಲೆ ಬಂದ್ ಮಾಡಿಸುವ ವ್ಯವಸ್ಥೆ ಮಾಡಬೇಕು. ಹುಣಸಿಹಡಗಿಲ್, ಆಶನಾಳ ತಾಂಡಾ ಸೇರಿದಂತೆ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಈ ವರ್ಷದಲ್ಲಿ ಎಷ್ಟು ರೈತರಿಗೆ ವಿಮೆ ಮತ್ತು ಬೆಳೆಹಾನಿ ಪರಿಹಾರ ಬಂದಿದೆ? ಆತಹತ್ಯೆ ಮಾಡಿಕೊಂಡ ರೈತರು ಮತ್ತು ಪರಿಹಾರ ನೀಡಿದ ವಿವರವನ್ನು ಒದಗಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಳಿಕ ಶಾಸಕರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-34-1207381391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.