ಕಲಬುರಗಿ: ನಿವೃತ್ತ ಪ್ರಾಧ್ಯಾಪಕರೊಬ್ಬರ ಮೊಬೈಲ್ ಕದ್ದು ಅದರಲ್ಲಿನ ಫೋನ್ಪೆ ಮೂಲಕ ₹1 ಲಕ್ಷವನ್ನು ಲೂಟಿ ಮಾಡಿದ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಇಲ್ಲಿನ ಶಿವಲಿಂಗ ನಗರದ ನಿವೃತ್ತ ಪ್ರಾಧ್ಯಾಪಕ ಶಿವಬಸಪ್ಪ ಇಸ್ರಾಜಿ ಮೊಬೈಲ್ ಮತ್ತು ಹಣ ಕಳೆದುಕೊಂಡವರು.

‘ಕಳೆದ ಡಿಸೆಂಬರ್ 2ರಂದು ಬೆಳಿಗ್ಗೆ ಸ್ವಗ್ರಾಮ ಆಳಂದ ತಾಲ್ಲೂಕಿನ ಕೊತನಹಿಪ್ಪರಗಾಕ್ಕೆ ತೆರಳಲು ನಗರದ ಆಳಂದ ಚೆಕ್ಪೋಸ್ಟ್ ಹತ್ತಿರ ಬಸ್ ಹತ್ತುವಾಗ ಜೇಬಿನಲ್ಲಿದ್ದ ಮೊಬೈಲ್ ಕಳವಾಗಿದೆ. ನಂತರ ಅದೇ ದಿನ ಬ್ಯಾಂಕಿನ ಸ್ಟೇಟ್ಮೆಂಟ್ ನೋಡಿದಾಗ ಫೋನ್ಪೆ ಮೂಲಕ ₹50 ಸಾವಿರದಂತೆ ಎರಡು ಸಲ ಹಣ ತೆಗೆದುಕೊಂಡಿರುವುದು ಗೊತ್ತಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಲಬುರಗಿ: ಇಲ್ಲಿನ ಶಾಂತಿ ನಗರದಲ್ಲಿರುವ ವೈದ್ಯೆಯೊಬ್ಬರ ಮನೆಯ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದ ಸ್ಕೂಟಿ ಕಳವು ಆಗಿದೆ.

ನಮ್ರತಾ ಸುಭಾಷ ಪಾಟೀಲ ಸ್ಕೂಟಿ ಕಳೆದುಕೊಂಡವರು. ಜಯದೇವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಅವರು, ಏ.16ರಂದು ರಾತ್ರಿ ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದು ತಮ್ಮ ಮನೆಯ ಕಾಂಪೌಂಡ್ ಒಳಗಡೆ ಸ್ಕೂಟಿ ನಿಲ್ಲಿಸಿದ್ದಾರೆ. ಮರುದಿನ ಬೆಳಿಗ್ಗೆ ನೋಡಿದಾಗ ಸ್ಕೂಟಿ ಕಾಣೆಯಾಗಿದೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-34-153427246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.