ಕಲಬುರಗಿ: ಮುಂಗಾರು ಮಳೆ ಪ್ರಾರಂಭ ಆಗುವುದರಿಂದ ರೈತರು ಅವಸರ ಮಾಡದೇ ಗುಣಮಟ್ಟದ ಬಿತ್ತನೆ ಬೀಜಗಳನ್ನು ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಳ್ಳಬೇಕು. ಉತ್ತಮ ಮಳೆಯಾದ ನಂತರ ಕನಿಷ್ಠ 2ರಿಂದ 3 ಇಂಚು ಭೂಮಿ ತೇವಾಂಶವಾದ ಬಗ್ಗೆ ಖಾತರಿಪಡಿಸಿಕೊಂಡು ಬಿತ್ತನೆ ಕೈಗೊಳ್ಳಬೇಕು ಎಂದು ಕಲಬುರಗಿ ಹಾಗೂ ಕಮಲಾಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಬರ ನಿರೋಧಕ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣವನ್ನು (2 ಗ್ರಾಂ ಪ್ರತಿ ಲೀಟರ್ ನೀರಿಗೆ) ತಯಾರಿಸಿ ಅದರಲ್ಲಿ ಬಿತ್ತನೆಗೆ ಮುಂಚೆ ಬಿತ್ತನೆ ಬೀಜಗಳನ್ನು ನೆನೆಸಿ ತದನಂತರ ನೆರಳಲ್ಲಿ ಒಣಗಿಸಬೇಕು. ಪಿ.ಎಸ್.ಬಿ, ರೈಜೋಬಿಯಂ, ಟ್ರೈಕೊಡರ್ಮಾ, ಬೀಜೋಪಚಾರ ಮಾಡಿ ಬಿತ್ತನೆ ಕೈಗೊಳ್ಳಬೇಕು. ಒಂದು ವೇಳೆ ಮನೆ ಬೀಜಗಳು ಬಿತ್ತನೆ ಕೈಗೊಂಡಲ್ಲಿ ಬೀಜ ಮೊಳಕೆಯ ಪರೀಕ್ಷೆ ಮತ್ತು ಬೀಜೋಪಚಾರ ಮಾಡಿ ಬಿತ್ತನೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-34-1397402899

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.