ಕಲಬುರಗಿ: ‘ಒಂಬತ್ತು ತಿಂಗಳು ಹೊತ್ತು, ಹೆತ್ತ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮನಾದ ವ್ಯಕ್ತಿ ಜಗತ್ತಿನಲ್ಲಿ ಯಾರೂ ಇಲ್ಲ’ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಹೊರ ವಲಯದ ರಾಣೇಶಪೀರ್ ದರ್ಗಾ ರಸ್ತೆಯಲ್ಲಿನ ‘ನೆಮ್ಮದಿ’ ವೃದ್ಧಾಶ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಇಡೀ ತನ್ನ ಜೀವನ ಸವೆಸಿ, ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಗೆ ಪೂಜ್ಯನೀಯ ಸ್ಥಾನ ನೀಡಬೇಕು. ತಾಯಿಯನ್ನು ಆರೈಕೆ ಮಾಡಿ, ಗೌರವಿಸಬೇಕಾದದ್ದು ಪ್ರಸ್ತುತ ದಿನಗಳಲ್ಲಿ ಅವಶ್ಯಕವಾಗಿದೆ’ ಎಂದರು.

ವೃದ್ಧಾಶ್ರಮದ ಹಿರಿಯ ತಾಯಂದಿರು ಸಾಮೂಹಿಕವಾಗಿ ಉದ್ಘಾಟಿಸಿದರು.

ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಬಾಬುರಾವ ಹಂಗರಗಿ, ವೃದ್ಧಾಶ್ರಮದ ಮುಖ್ಯಸ್ಥರಾದ ಆನಂದರಾಜ್, ಯಶೋಧಾ, ವ್ಯವಸ್ಥಾಪಕಿ ಬಸಮ್ಮ ಕೆ.ಸ್ಥಾವರಮಠ, ತಾಯಂದಿರಾದ ಅಂಬಿಕಾ ಗೋಳೆ, ಲಕ್ಷ್ಮಿಬಾಯಿ ಜಾಧವ, ಶಶಿಕಲಾ ಕುಲಕರ್ಣಿ, ಚನ್ನಮ್ಮ ಮಠ, ಮಾಣೆಮ್ಮ ಗುತ್ತೇದಾರ, ಪದ್ಮಾವತಿ ಹಾವೇರಿ, ಶಾಂತಾಬಾಯಿ ಕೊಳ್ಳುರ, ಭಾಗೀರಥಿ ನೀಲೂರ, ಶಾಂತಾಬಾಯಿ ಜೈನ್, ಸರುಬಾಯಿ ಹೀರಾಪುರ, ಕಮಲಾಬಾಯಿ ಸುಲ್ತಾನಪುರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-34-1373624021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.