ಕಲಬುರಗಿ: ‘ಸಂಗೀತವು ಮನಸ್ಸಿಗೆ ಶಾಂತಿ, ಸಮಾಧಾನ ನೆಮ್ಮದಿ ನೀಡಿ, ಜೀವನದಲ್ಲಿ ಹುರುಪು ಹುಮ್ಮಸ್ಸು ನೀಡಲು ಸಹಕಾರಿ ಆಗಿದೆ’ ಎಂದು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ. ಪಾಟೀಲ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಂಗಳವಾರ ಎಸ್.ಎನ್. ಕುಮುದಿನಿಬಾಯಿ ಮಿಟ್ಟಿಮನಿ ಸ್ಮರಣಾರ್ಥ ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಗಾಯಕನೊಬ್ಬ ಗಾಯನ ಪ್ರಕಾರ ವಿವಿಧ’ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಭಾಗದ ಅನೇಕ ಕಲಾವಿದರಿಗೆ ಆಕಾಶವಾಣಿ ಹಾಗೂ ದೂರದರ್ಶನ ಒಳ್ಳೆಯ ಅವಕಾಶ ನೀಡಿ ಸಂಗೀತ, ಕಲೆ, ಸಾಹಿತ್ಯ ಬೆಳೆಸಲು ಸಹಕಾರಿಯಾಯಿತು. ಆದರೆ, ಕರೋಕೆ ಯುಗದಲ್ಲಿ ಹಾಡುವವರೇ ಹೆಚ್ಚು. ಕೇಳುವವರೇ ಇಲ್ಲವಾಗಿದೆ’ ಎಂದು ವಿಷಾದಿಸಿದರು.

ಗುಲಬುರ್ಗಾ ವಿಶ್ವವಿದ್ಯಾಲಯದ ಮಾಜಿ ಪ್ರಭಾರ ಕುಲಪತಿ ಪ್ರೊ.ಅಬ್ಬುಲ್ ರಬ್ ಉಸ್ತಾದ್ ಮಾತನಾಡಿ, ‘ಸಂಗೀತದಲ್ಲಿ ಹಿಂದಿ ಚಲನಚಿತ್ರದಲ್ಲಿ ಮೊಹಮ್ಮದ್ ರಫಿ, ಕಿಶೋರ್, ಸಂಗೀತ ನಿರ್ದೇಶಕ ನೌಶಾದ್ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

ಹಿರಿಯ ಗಾಯಕ, 'ವಾಯ್ಸ್ ಆಫ್ ಕಿಶೋರ್ಕುಮಾರ್' ಖ್ಯಾತಿಯ ರಮೇಶ ಜೋಶಿ ಅವರು ವಿವಿಧ ಗಾಯನ ಪ್ರಕಾರಗಳನ್ನು ಪ್ರಸ್ತುತಪಡಿಸಿದರು. ಅವರ ಜತೆಗೆ ಅವರ ಮೊಮ್ಮಗಳು ಶ್ರೀಶಾ ಜೋಶಿ ಹಾಡಿದರು.

ತಬಲಾ ವಾದಕ ಜಯರಾವ ಕುಲಕರ್ಣಿ, ಸಂಗೀತ ಕಲಾವಿದ ಪ್ರಕಾಶ ಕುಲಕರ್ಣಿ, ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಕೆ.ಪಿ. ಗಿರಿಧರ, ಸಾಹಿತಿ ಅಂಬುಜಾ ಮಳಖೇಡಕರ ಉಪಸ್ಥಿತರಿದ್ದರು. ಪ್ರಸಾದ ಅಷ್ಟಗಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-34-1802432975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.