ಕಲಬುರಗಿ: ದೇವ, ದಾನವ ಮತ್ತು ಮಾನವ ಮೂರೂ ಲೋಕಗಳಿಗೂ ಸಂವಾದಕರಾಗಿದ್ದ ದೇವಋಷಿ ನಾರದ ಅವರದ್ದು ವರ್ಣರಂಜಿತ ವ್ಯಕ್ತಿತ್ವ ಎಂದು ಆರ್ಎಸ್ಎಸ್ನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ಅರುಣಕುಮಾರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಕೇಶವ ಸೇವಾ ಸಮಿತಿ ಆಯೋಜಿಸಿದ್ದ ನಾರದ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೇರೆ ರಾಜ್ಯಗಳಲ್ಲಿ 1998ರಿಂದಲೇ ನಾರದ ಜಯಂತಿ ಆರಂಭವಾದರೆ ಕರ್ನಾಟಕದಲ್ಲಿ ನಾವು 2010ರಿಂದ ಈ ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ. ನಾರದರನ್ನು ಹಲವು ಕಡೆ ಪೂಜ್ಯನೀಯವಾಗಿ ಕಾಣಲಾ ಗುತ್ತದೆ. ಆದರೆ ನಮ್ಮಲ್ಲಿ ವ್ಯಂಗ್ಯ ಮತ್ತು ತಮಾಷೆಯ ವಸ್ತುವನ್ನಾಗಿ ನೋಡಲಾ ಗುತ್ತಿದೆ. ಇದು ನಮ್ಮ ಮಾನಸಿಕತೆಗೆ ಮಾಡಿಕೊಳ್ಳುವ ಅವಮಾನ’ ಎಂದರು.

‘ಈಗಿನದ್ದು ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮವಾದರೆ ಆಗಿನ ಕಾಲದಲ್ಲಿ ಮನಸ್ಸುಗಳ ಮೂಲಕವೇ ಸುದ್ದಿಗಳ ವಿನಿಮಯ ನಡೆಯುತ್ತಿತ್ತು. ನವರಸಗಳನ್ನು ಮೈಗೂಡಿಸಿಕೊಂಡಿದ್ದ ನಾರದರು ಬ್ರಹ್ಮನ ಮಾನಸ ಪುತ್ರ ಎನಿಸಿಕೊಂಡಿದ್ದರು’ ಎಂದರು.

ಇಂಗ್ಲಿಷ್ನಿಂದ ಮುಕ್ತರಾಗೋಣ: ’ಇಂಗ್ಲಿಷ್ ಭಾಷೆಯಿಂದ ಕನ್ನಡದ ಕೊಲೆಯಾಗುತ್ತಿದೆ. ನಾವು ಬ್ರಿಟಿಷರು ಬಿಟ್ಟುಹೋದ ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಮುಕ್ತರಾಗಬೇಕು. ನಮ್ಮತನವನ್ನು ಬೆಳೆಸಿಕೊಳ್ಳಬೇಕು. 5 ಕೋಟಿ ಜನರಾಡುವ ಕನ್ನಡ, ಸುಮಾರು 10 ಕೋಟಿ ಜನರ ತೆಲುಗು ಭಾಷೆಗಳಿಗಿಂತ ದೇಶದ 60 ಕೋಟಿ ಜನರು ಮಾತನಾಡುವ ಹಿಂದಿ ಭಾಷೆ ರಾಷ್ಟ್ರದ ಸಂಪರ್ಕ ಭಾಷೆಯಾಗಬೇಕು’ ಎಂದು ಪ್ರತಿಪಾದಿಸಿದರು.

‘ದೇಶದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ತಮ್ಮತನವನ್ನು ಬೆಳೆಸಿದರು. ಕ್ಷಿಪಣಿಗಳಿಗೆ ಅಗ್ನಿ, ಆಕಾಶ್, ಪೃಥ್ವಿ ಎಂಬ ಹೆಸರಿಟ್ಟರು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷ್ಣಾ ಜೋಶಿ, ‘ಸುದ್ದಿಯ ವಾಹಕರಾಗಿದ್ದ ನಾರದ ಯುಗದಿಂದ ಯುಗಕ್ಕೂ ಸುದ್ದಿ ತಲುಪಿಸಿದವರು. ನಾರದರೆಂದರೆ ಕೇವಲ ಜಗಳ ಹಚ್ಚುವವ ಎಂಬ ಮಾತು ಇದೆ. ಆದರೆ ಲೋಕಕಲ್ಯಾಣ ಹಾಗೂ ಎಲ್ಲರ ಒಳಿತಿಗಾಗಿ ಅವರು ಶ್ರಮಿಸಿದರು. ಮಾಧ್ಯಮಗಳು ಜನರಿಗೆ ಒಳ್ಳೆಯದನ್ನೇ ಮಾಡುತ್ತಿವೆ. ಮುಂದೆಯೂ ಮಾಡಬೇಕು. ಜೀವಬೆದರಿಕೆಗಳನ್ನೂ ಮೀರಿ ಕೆಲಸ ನಿರ್ವಹಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ’ ಎಂದರು.

ಸನ್ಮಾನಕ್ಕೆ ಭಾಜನರಾದ ಪತ್ರಕರ್ತರಾದ ಹಣಮಂತರಾವ್ ಡಿ. ಬೈರಾಮಡಗಿ, ದೇವೇಂದ್ರಪ್ಪ ಆವಂಟಿ, ಶಿವರಾಜ ದೊಡ್ಡಮನಿ, ನಾಗನಾಥ ಯಾದಗಿರಿ ಮಾತನಾಡಿದರು. ಪತ್ರಕರ್ತ ಸಂಜೀವ ರೆಡ್ಡಿ ಅವರಿಗೂ ಸನ್ಮಾನ ನಡೆಯಿತು. ಪತ್ರಕರ್ತ ಶಿವರಾಯ ದೊಡಮನಿ ಮಾತನಾಡಿದರು.

ಗಣ್ಯರು ನಾರದದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಗುರುಬಸವ ಅಂಗಡಿ ಸ್ವಾಗತಿಸಿದರು. ಆರ್ಎಸ್ಎಸ್ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-34-1032093307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.