ಕಲಬುರಗಿ: ನಗರದ ನೆಹರೂ ಗಂಜ್ ಎಪಿಎಂಸಿ ಆವರಣದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಪ್ರತಿಮೆ ಸ್ಥಾಪನೆ ವಿರೋಧಿಸಿ ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಮಂಗಳವಾರ ವ್ಯಾಪಾರ–ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಎಪಿಎಂಸಿ ಆವರಣದ ಹನುಮಾನ ದೇವಸ್ಥಾನದ ಬಳಿ ಜಮಾಯಿಸಿದ ಪ್ರತಿಭಟನಕಾರರು ಬಿರು ಬಿಸಿಲಿನಲ್ಲೇ ಎಪಿಎಂಸಿ ಆಡಳಿತ ಕಚೇರಿ ತನಕ ಪ್ರತಿಭಟನಾ ರ್ಯಾಲಿ ನಡೆಸಿದರು.

‘ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿ 1947ರಲ್ಲಿ ರೈತರು ಮತ್ತು ವ್ಯಾಪಾರಿಗಳ ಅನುಕೂಲಕ್ಕಾಗಿ ಎಪಿಎಂಸಿ ಆಡಳಿತ ಕಚೇರಿ ಸ್ಥಾಪಿಸಲಾಗಿತ್ತು. ಅದು ಶಿಥಿಲಗೊಂಡ ಹಿನ್ನೆಲೆಯಲ್ಲಿ ಅದನ್ನು ನೆಲಸಮಗೊಳಿಸಲಾಗಿದೆ. ಅದೇ ಸ್ಥಳದಲ್ಲಿ ಇದೀಗ ಮೂರ್ತಿ ಸ್ಥಾಪನೆಗೆ ಹುನ್ನಾರ ನಡೆದಿದೆ. ಅದರ ಬದಲು ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಟೆಂಡರ್ ಹಾಲ್ ಹಾಗೂ ಎಪಿಎಂಸಿ ಆಡಳಿತ ಕಚೇರಿ ನಿರ್ಮಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ ಲಂಗರ ಮಾತನಾಡಿ, ‘ಕಲಬುರಗಿ ಎಪಿಎಂಸಿಯ ಹೃದಯ ಭಾಗದಲ್ಲಿದ್ದ ಶಿಥಿಲಗೊಂಡ ಆಡಳಿತ ಭವನ ಇತ್ತೀಚೆಗೆ ಕೆಡವಲಾಗಿದೆ. ಅದೇ ಸ್ಥಳದಲ್ಲಿ ಹೊಸ ಆಡಳಿತ ಕಚೇರಿ ನಿರ್ಮಿಸುವ ಉದ್ದೇಶವಿತ್ತು. ಅದಕ್ಕಾಗಿ ಸರ್ಕಾರಕ್ಕೆ ಅಂದಾಜು ₹5 ಕೋಟಿ ವೆಚ್ಚದ ಪ್ರಸ್ತಾವವೂ ಸಲ್ಲಿಕೆಯಾಗಿತ್ತು. ಆದರೆ, ಈ ನಡುವೆ ಏನೆಲ್ಲ ಬೆಳವಣಿಗೆ ಆಯಿತೋ ಗೊತ್ತಿಲ್ಲ. ಇದೀಗ ಉದ್ದೇಶಿತ ಸ್ಥಳದಲ್ಲಿ ಆಡಳಿತ ಕಚೇರಿ ನಿರ್ಮಾಣ ಕೈಬಿಟ್ಟು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಮೂರ್ತಿ ಸ್ಥಾಪನೆಗೆ ಕಾಮಗಾರಿ ಆರಂಭವಾಗಿದೆ. ಇದಕ್ಕೆ ನಮ್ಮೆಲ್ಲರ ವಿರೋಧವಿದೆ’ ಎಂದರು.

‘ಎಪಿಎಂಸಿ ಪ್ರದೇಶದ ವ್ಯಾಪಾರಸ್ಥರು ಯಾವುದೇ ಪಕ್ಷ/ನಾಯಕರ ವಿರೋಧಿಗಳಲ್ಲ. ಯಾವುದೇ ನಾಯಕರ ಮೂರ್ತಿ ಸ್ಥಾಪನೆಗೂ ನಮ್ಮ ವಿರೋಧವಿಲ್ಲ. ಆದರೆ, ಹಳೆಯ ಕಟ್ಟಡವಿದ್ದ ಜಾಗದಲ್ಲಿ ಹೊಸ ಕಟ್ಟಡವನ್ನೇ ನಿರ್ಮಿಸಬೇಕು. ಅದರಲ್ಲಿ ಸುಸಜ್ಜಿತ ಗಣಕೀಕೃತ ಟೆಂಡರ್ ಹಾಲ್ ಹಾಗೂ ಆಡಳಿತ ಕಚೇರಿ ಸ್ಥಾಪಿಸಬೇಕು. ಬೇರೆ ಯಾವುದೇ ಸ್ಥಳದಲ್ಲಿ ನೆಹರೂ ಅವರ ಮೂರ್ತಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟಗಾರ ಎಂ.ಎಸ್.ಪಾಟೀಲ ನರಿಬೋಳ ಮಾತನಾಡಿ, ‘ಹೊಸ ಕಟ್ಟಡ ನಿರ್ಮಿಸಬೇಕಿದ್ದ ಸ್ಥಳದಲ್ಲಿ ಇದೀಗ ಏಕಾಏಕಿ ನೆಹರೂ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಅದಕ್ಕೆ ಎಪಿಎಂಸಿ ಅಧಿಕಾರಿಗಳ ಅನುಮತಿಯನ್ನೂ ಪಡೆದಿಲ್ಲ. ಹೀಗಾಗಿ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಆ ಜಾಗದಲ್ಲಿ ಎಪಿಎಂಸಿ ಆಡಳಿತ ಕಚೇರಿ ಇಲ್ಲವೇ ರೈತರ ಮ್ಯೂಸಿಯಂ ಇಲ್ಲವೇ ರೈತರ ವಿಶ್ರಾಂತಿಧಾಮ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್ನವರು ತಮ್ಮ ಪಕ್ಷದ ಬ್ಯಾನರ್ನಲ್ಲೇ ನೆಹರೂ ಚಿತ್ರ ಹಾಕುವುದನ್ನು ಮರೆತಿದ್ದಾರೆ. ಅಂಥ ನೆಹರೂ ಪ್ರತಿಮೆ ಎಪಿಎಂಸಿಯಲ್ಲಿ ಸ್ಥಾಪಿಸುವುದು ಖಂಡನೀಯ. ಒಂದೊಮ್ಮೆ ಮೂರ್ತಿ ಸ್ಥಾಪಿಸಿದರೂ ಅದನ್ನು ಕಡೆಹುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಕೆಸಿಸಿಐ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ, ಬಸವರಾಜ ತಡಕಲ, ಶರಣಪ್ಪ ಬಾಳಿ, ಶ್ರೀಮಂತಪ್ಪ ಉದನೂರ, ಚಂದ್ರಶೇಖರ ಬಿಜಾಪುರ, ಶಶಿಕಾಂತ ಪಾಟೀಲ ಚಿತ್ತಾಪುರ, ಮಹೇಶ ಪಾಟೀಲ ಕೂಡಿ, ಸಂಗನಬಸಪ್ಪ ಹಿರೇಗೌಡ, ಸಿದ್ದಲಿಂಗ ಕೊಪ್ಪಿ, ಸಂಜುಕುಮಾರ ಮುಗಳಿ, ವಿಜಯಕುಮಾರ ಬಿರಾದಾರ, ಸಂತೋಷಕುಮಾರ ನಿಂಗದೆ, ಬಸವರಾಜ ಪ್ಯಾಟಿ, ಸಂತೋಷಕುಮಾರ ಬಾಳಿ, ಭೀಮಶ್ಯ ಜೀವಣಗಿ, ಚಂದ್ರಕಾಂತ್ ಕಲ್ಯಾಣಪ್ಪ ನಂದಿಕೂರ, ರವೀಂದ್ರ ಸುಲೇಪೇಟ, ಮಲ್ಲಿಕಾರ್ಜುನ ಹೊಸಗೌಡ, ಲಕ್ಷ್ಮೀಕಾಂತ ಸ್ವಾದಿ, ಮಹೇಶ ಕೆಂಭಾವಿ, ಹುಚ್ಚೇಶ್ವರ ವಠಾರ ಸೇರಿದಂತೆ ಹಮಾಲರ ಸಂಘ, ಗುಮಾಸ್ತರ ಸಂಘ, ಅಕ್ಕಿ ವ್ಯಾಪಾರಸ್ಥರ ಸಂಘ, ಕಿರಾಣಾ ಮರ್ಚೆಂಟ್ಸ್ ಅಸೋಸಿಯೇಷನ್, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-34-398057289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.