ಕಲಬುರಗಿ: ಮೊಬೈಲ್ ಫೋನ್ಗೆ ಬಂದ ಎಪಿಕೆ ಫೈಲ್ನ ಲಿಂಕ್ ಒತ್ತಿದ ವ್ಯಕ್ತಿಯೊಬ್ಬರು ಬರೋಬ್ಬರಿ ₹2.58 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ದುಬೈ ಕಾಲೊನಿ ನಿವಾಸಿ, ಮಹೀಂದ್ರಾ ಫೈನಾನ್ಸ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿರುವ ರಾಜು ದೈಪುಲೆ ಹಣ ಕಳೆದುಕೊಂಡವರು.

‘ಮೇ 13ರಂದು ಸಂಜೆ 5 ಗಂಟೆ ಹೊತ್ತಿಗೆ ನನ್ನ ಮೊಬೈಲ್ ಫೋನ್ಗೆ ಮಹೀಂದ್ರಾ ಫೈನಾನ್ಸ್ನ ಗ್ರಾಹಕರೊಬ್ಬರ ಮೊಬೈಲ್ನಿಂದ ಎಪಿಕೆ ಫೈಲ್ ಲಿಂಕ್ ಬಂತು. ಅದನ್ನು ಕ್ಲಿಕ್ ಮಾಡಿದಾಗ ನನ್ನ ಮೊಬೈಲ್ ಫೋನ್ ಒಂದು ಗಂಟೆ ಹೊತ್ತು ಬಹುತೇಕ ಸ್ಥಗಿತಗೊಂಡಿತ್ತು. ಬಳಿಕ ನೋಡಿದಾಗ ಸೈಬರ್ ವಂಚಕರು ನನ್ನದೇ ಫ್ಲಿಫ್ ಕಾರ್ಟ್ ಖಾತೆ ಮೂಲಕ ನನ್ನದೇ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ₹2.58 ಲಕ್ಷ ಮೊತ್ತದ ಒಟ್ಟು ಮೂರು ಮೊಬೈಲ್ ಫೋನ್ ಖರೀದಿಸಿ ಬಿಹಾರ್ ರಾಜ್ಯದ ಪಟ್ನಾ ವಿಳಾಸಕ್ಕೆ ತರಿಸಿಕೊಂಡಿರುವುದು ಗೊತ್ತಾಯಿತು. ವಂಚಕರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ರಾಜು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಟು ಜಾನುವಾರುಗಳ ರಕ್ಷಣೆ: ಕಲಬುರಗಿಯಲ್ಲಿ ಬುಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು, ಅವುಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.

ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ₹4 ಲಕ್ಷ ಮೊತ್ತದ ವಾಹನ ಹಾಗೂ ಎಂಟು ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಬರ್ಬನ್ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕ ಹಾಗೂ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ನೇಣುಹಾಕಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ: ಕಲಬುರಗಿ ನಗರದ ಫಿಲ್ಟರ್ ಬೆಡ್ ಪ್ರದೇಶದ ಆಶ್ರಯ ಕಾಲೊನಿಯಲ್ಲಿ ಬೇವಿನ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

ಮಚ್ಚೆಂದ್ರ ಮಾಂಕಳಕರ ಮೃತರು. ಮಚ್ಚೆಂದ್ರ ತಲೆಗೆ ಗಾಯದ ಗುರುತುಗಳಿದ್ದು, ಸಾವಿನಲ್ಲಿ ಸಂಶಯವಿದೆ ಎಂದು ಕುಟುಂಬದ ಸದಸ್ಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ‘ಅಸಹಜ ಸಾವು’ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-34-39896408

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.