ಕಲಬುರಗಿ: ನಗರದ ಹಳೇ ಜೇವರ್ಗಿ ರಸ್ತೆಯ ಪಿ ಅಂಡ್ ಟಿ ಕಾಲೊನಿಯಲ್ಲಿರುವ ಜುಡಿಯೊ ಮಳಿಗೆ ಎದುರಿನ ‘ಫಿಜ್ಜಾ–ಬರ್ಗರ್’ ಸಿದ್ಧಪಡಿಸುವ ‘ಬರ್ಕಾರ್ನಜ್ಜಾ’ ಮಳಿಗೆಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಬೆಂಕಿ ಹೊತ್ತಿ ಧಗಧಗ ಉರಿದಿದೆ.

ಈ ದುರಂತದಲ್ಲಿ ಪೀಠೋಪಕರಣಗಳು, ಫಿಜ್ಜಾ–ಬರ್ಗರ್ ಸಿದ್ಧಪಡಿಸುವ ದುಬಾರಿ ಓವನ್, ಎರಡು ಫ್ರಿಡ್ಜ್ಗಳು, ತಂಪು ಪಾನೀಯ ಹಾಗೂ ನೀರಿನ ಬಾಟಲಿಗಳು, ದಿನಸಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಎರಡು ಎಲ್ಪಿಜಿ ಸಿಲಿಂಡರ್ ಕೂಡ ಸುಟ್ಟಿವೆ. ಲಕ್ಷಾಂತರ ರೂಪಾಯಿ ಹಾನಿ ಅಂದಾಜಿಸಲಾಗಿದೆ.

ಎಲ್ಪಿಜಿ ಸಿಲಿಂಡರ್ನ ಗ್ಯಾಸ್ ಪೈಪ್ನಲ್ಲಿ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಅಂಗಡಿಯು ಝಂಝಂ ಕಾಲೊನಿಯ ನಿವಾಸಿ ಇರ್ಫಾನ್ ಶೇಖ್ ಎಂಬುವರಿಗೆ ಸೇರಿದ್ದಾಗಿದೆ ಎಂದು ಮೂಲಗಳು ಹೇಳಿವೆ.

‘ಮಧ್ಯಾಹ್ನ 2.05 ನಿಮಿಷಕ್ಕೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿ ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಆನಂದ ವೃತ್ತದಲ್ಲಿ ಜನ–ವಾಹನಗಳ ದಟ್ಟಣೆಯ ಕಾರಣಕ್ಕೆ ಕಾರ್ಯಾಚರಣೆ ಸ್ಥಳ ತಲುಪುವುದು ತುಸು ವಿಳಂಬವಾಯಿತು’ ಎಂದು ಸಹಾಯಕ ಅಗ್ನಿಶಾಮಕ ಅಧಿಕಾರಿ ಮರಿಲಿಂಗಪ್ಪ ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ಸುಭಾಷ, ಬಂದಗಿಸಾಬ್, ಸತೀಶ ಪಾಟೀಲ, ಶಶಿಧರ ಬಡಿಗೇರ, ಪ್ರದೀಪಕುಮಾರ, ರಾಮಜಿ, ಗಬ್ಬರ್ ಸಿಂಗ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-34-2083286580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.