ಕಲಬುರಗಿ: 2018–19ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಇನ್ನೂ ಪೂರ್ಣಗೊಳ್ಳದೇ ಇರುವ ಕುರಿತು ಫಲಾನುಭವಿ ಪ್ರಶಾಂತ ಭೀಮರಾವ ಅವರು ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

‘ತಾರಫೈಲ್ 13ನೇ ಕ್ರಾಸ್ ನಿವಾಸಿ ರೇಣುಕಾ ಪ್ರಶಾಂತ ಅವರ ಹೆಸರಿನಲ್ಲಿ ಮನೆ ಮಂಜೂರಾಗಿದ್ದು, ಡಿ.ಡಿ ಕೂಡ ಪಾವತಿಸಲಾಗಿದೆ. ಆದರೆ, ಮನೆ ಕಾಮಗಾರಿ ಬೇಸ್ಮೆಂಟ್ ಹಂತದಲ್ಲೇ ನಿಂತಿದೆ. ಈ ಕುರಿತು ಹಲವು ಬಾರಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಶೀಘ್ರ ಮನೆ ಪೂರ್ಣಗೊಳಿಸುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದಾಗ ಅಧಿಕಾರಿಗಳು ಬೇರೆ ಮನೆಯ ಛಾಯಾಚಿತ್ರ ನೀಡಿ ಮನೆ ಪೂರ್ಣಗೊಂಡಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಸುರೇಶ ಇಟಗಿ, ಗುಂಡೇಶ ಶಿವನೂರ, ದೇವೇಂದ್ರ ಕವಳೇಕಾರ, ದತ್ತು ಹೈಯಾಳಕರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-34-1402233582

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.