ಕಲಬುರಗಿ: ಪೊಲೀಸ್ ಸಿಬ್ಬಂದಿಗಾಗಿ ₹20.88 ಕೋಟಿ ವೆಚ್ಚದಲ್ಲಿ ಕಲಬುರಗಿ, ಅಫಜಲಪುರ, ಆಳಂದ, ದೇವಲಗಾಣಗಾಪುರದಲ್ಲಿ ನಿರ್ಮಿಸಿರುವ 72 ವಸತಿಗೃಹಗಳು ಹಾಗೂ ಕ್ಷಿಪ್ರ ಸ್ಪಂದನ ಪಡೆಯ ವಾಹನ, ಎರ್ಟಿಗಾ ಕಾರು, ಮಹಿಂದ್ರ ಬೊಲೆರೊ ಹಾಗೂ ಅಪಾಚೆ ಬೈಕ್ಗಳನ್ನು ಗೃಹ ಸಚಿವ ಜಿ.ಪರಮೇಶ್ವರ ಮಂಗಳವಾರ ಲೋಕಾರ್ಪಣೆ ಮಾಡಿದರು.

ನಗರದ ಪೊಲೀಸ್ ಕಮಿಷನರ್ ಕಚೇರಿ ಎದುರು ವಿವಿಧ ವಾಹನಗಳಿಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಸೇರಿದಂತೆ ಇತರ ಜನಪ್ರತಿನಿಧಿಗಳೊಂದಿಗೆ ಗೃಹ ಸಚಿವರು ವಾಹನಗಳನ್ನು ಪೊಲೀಸರ ಬಳಕೆಗೆ ಮುಕ್ತಗೊಳಿಸಿದರು. ಅಲ್ಲಿಂದ ಸಿಎಆರ್ ಮೈದಾನದಕ್ಕೆ ತೆರಳಿದ ಅವರು ಅಲ್ಲಿ 72 ವಸತಿಗೃಹಗಳನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ, ‘ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸ್ಸಿಬ್ಬಂದಿಯ ಕ್ಷೇಮಾಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕಲಬುರಗಿ ನಗರದಲ್ಲಿ 24 ಪೊಲೀಸ್ ವಸತಿ ಗೃಹ ಕಟ್ಟಡಗಳು, ಅಫಜಲಪುರ ಪಟ್ಟಣದಲ್ಲಿ 24, ದೇವಲಗಾಣಗಾಪುರದಲ್ಲಿ 12, ಆಳಂದ ಪಟ್ಟಣದಲ್ಲಿ 12 ಪೊಲೀಸ್ ವಸತಿಗೃಹ ಕಟ್ಟಡಗಳನ್ನು ಪೊಲೀಸ್ ಸಿಬ್ಬಂದಿಗೆ ಸಮರ್ಪಿಸಲಾಗಿದೆ’ ಎಂದರು.

‘ಬ್ರಿಟಿಷರ ಕಾಲದ ಹಳೆಯ ‘ಪೊಲೀಸ್ ಲೈನ್’ ಮನೆಗಳ ಬದಲಿಗೆ ಆಧುನಿಕ ಸೌಲಭ್ಯವುಳ್ಳ ‘ಪೊಲೀಸ್ ಗೃಹ’ ಯೋಜನೆಯಡಿ ರಾಜ್ಯದಾದ್ಯಂತ ಈಗಾಗಲೇ 40,712 ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 1,830 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಉತ್ತಮ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದರು.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರೂ ಆದ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಚಿಸ್ತಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಡಿಜಿಪಿ ಎಂ.ಎ. ಸಲೀಂ, ಈಶಾನ್ಯ ವಲಯದ ಡಿಐಜಿಪಿ ಶಾಂತನು ಸಿನ್ಹಾ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಭಾಗವಹಿಸಿದ್ದರು.

ಕಲಬುರಗಿ ಪೊಲೀಸ್ ಕಮಿ ಷನರ್ ಶರಣಪ್ಪ ಎಸ್.ಡಿ. ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-34-927403626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.