ಕಲಬುರಗಿ: ಬಸ್ ನಿಲ್ದಾಣ, ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಜನರು ಕಳೆದುಕೊಂಡಿದ್ದ ಮೊಬೈಲ್ ಫೋನ್ಗಳ ಪತ್ತೆಗೆ ‘ಆಪರೇಷನ್ ಭರವಸೆ’ ಕಾರ್ಯಾಚರಣೆ ನಡೆಸಿರುವ ಕಲಬುರಗಿ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು, ಬರೋಬ್ಬರಿ 785 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿದ್ದಾರೆ. ಅವುಗಳನ್ನು ಗುರುವಾರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

‘ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳ ಪತ್ತೆಗೆ ಮಾರ್ಚ್ ತಿಂಗಳಿಂದ ಈತನಕ ಆಪರೇಷನ್ ಭರವಸೆ ಎಂಬ ಕಾರ್ಯಾಚರಣೆ ನಡೆಸಲಾಗಿದೆ. ಈ ಅವಧಿಯಲ್ಲಿ ಪೊಲೀಸರ ಕಾರ್ಯಕ್ಷಮತೆಯಿಂದ ₹1.45 ಕೋಟಿ ಮೊತ್ತದ 785 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಲಾಗಿದೆ. ಇದು ಕಲಬುರಗಿ ಪೊಲೀಸ್ ಕಮಿಷನರೇಟ್ ಇತಿಹಾಸದಲ್ಲೇ ದೊಡ್ಡ ಪತ್ತೆ ಕಾರ್ಯ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜನರು ತಾವು ಕಳೆದುಕೊಂಡಿದ್ದ ಮೊಬೈಲ್ ಫೋನ್ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಜಾಗೂ ಇ–ಲಾಸ್ಟ್ ಪೋರ್ಟಲ್ಗಳಲ್ಲಿ ದೂರು ದಾಖಲಿಸಿದ್ದರು. ಈ ದೂರುಗಳಿಗೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ 487, ಕಲಬುರಗಿ ಗ್ರಾಮೀಣ ಪ್ರದೇಶದಲ್ಲಿ 103, ವಿಜಯಪುರದಲ್ಲಿ 20, ಬೀದರ್ನಲ್ಲಿ 18, ಬೆಂಗಳೂರಿನಲ್ಲಿ 17, ಯಾದಗಿರಿಯಲ್ಲಿ 16, ರಾಯಚೂರಿನಲ್ಲಿ 12, ವಿಜಯನಗರದಲ್ಲಿ 8, ಬಳ್ಳಾರಿಯಲ್ಲಿ 7 ಸೇರಿದಂತೆ ರಾಜ್ಯದಲ್ಲಿ 688 ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ಇದಲ್ಲದೇ, ಮಹಾರಾಷ್ಟ್ರದಲ್ಲಿ 41, ಆಂಧ್ರದಲ್ಲಿ 23, ತೆಲಂಗಾಣದಲ್ಲಿ 23, ಬಿಹಾರದಲ್ಲಿ 7 ಹಾಗೂ ಉತ್ತರ ಪ್ರದೇಶದಲ್ಲಿ 3 ಸೇರಿದಂತೆ ಒಟ್ಟು 785 ಮೊಬೈಲ್ ಫೋನ್ಗಳನ್ನು ನಮ್ಮ ಪೊಲೀಸರು ಪತ್ತೆ ಮಾಡಿದ್ದಾರೆ’ ಎಂದು ವಿವರಿಸಿದರು.

‘ಈ ಪ್ರಕರಣಗಳ ಹಿಂದೆ ಸಂಘಟಿತ ಗುಂಪಿನ ಕೈವಾಡದ ಬಗೆಗೂ ಪರಿಶೀಲಿಸಲಾಗಿದೆ. ಕಳವಿನಲ್ಲಾಗಲಿ ಅಥವಾ ಕದ್ದ ಮೊಬೈಲ್ಗಳ ಖರೀದಿಯಲ್ಲಾಗಲಿ ಅಂಥ ಯಾವುದೇ ಗುಂಪಿನ ಕೈವಾಡ ಪತ್ತೆಯಾಗಿಲ್ಲ. ಕಡಿಮೆ ಶಿಕ್ಷಣ ಪಡೆದವರು, ಕಾನೂನಿನ ಅರಿವು ಇಲ್ಲದವರು, ಕೃಷಿಕರೇ ಹೆಚ್ಚಾಗಿ ಈ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡು ಬಂದಿದೆ’ ಎಂದು ಶರಣಪ್ಪ ಎಸ್.ಡಿ. ತಿಳಿಸಿದರು.

‘ಕಳೆದರೆಡು ವರ್ಷಗಳ ಹಿಂದೆ ಕಳವಾದ ಮೊಬೈಲ್ಗಳ ಪತ್ತೆ ಪ್ರಮಾಣ ಶೇ 28ರಿಂದ ಶೇ 30ರಷ್ಟಿತ್ತು. ಆದರೆ, ತಾಂತ್ರಿಕ ನೆರವು ಹಾಗೂ ಪೊಲೀಸರ ಕಾರ್ಯಕ್ಷಮತೆಯಿಂದಾಗಿ ಇದೀಗ ಕೆಲವು ಠಾಣೆಗಳಲ್ಲಿ ಈ ಪ್ರಮಾಣವು ಶೇ 78ರಷ್ಟಿದೆ. ಒಟ್ಟು ಸರಾಸರಿಯಾಗಿ ಶೇ 55ರಷ್ಟಿದೆ’ ಎಂದರು.

ಎಚ್ಚರಿಕೆ ವಹಿಸಿ: ‘ಮೊಬೈಲ್ ಫೋನ್ಗಳು ಬರೀ ಸಂವಹನ ಸಾಧನಗಳಾಗಿ ಉಳಿದಿಲ್ಲ. ಅವು ಬ್ಯಾಂಕಿಂಗ್ ವಹಿವಾಟು, ದಾಖಲೆ ಪತ್ರಗಳ ಶೇಖರಣೆ, ಖಾಸಗಿ ಚಿತ್ರಗಳ, ಕುಟುಂಬದ ಚಿತ್ರಗಳನ್ನು ಶೇಖರಿಸುವ ಆಲ್–ಇನ್–ಒನ್ ಸಾಧನವಾಗಿದೆ. ಹೀಗಾಗಿ ಇಂಥ ಸಾಧನಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಮೊಬೈಲ್ ಫೋನ್ಗಳಿಗೆ ಕಠಿಣವಾದ ಪಾಸ್ವರ್ಡ್ ಇಡಬೇಕು. ಬೆರಳಚ್ಚು ಲಾಕ್ ಅಳವಡಿಸಬೇಕು. ಫೈಂಡ್ ಮೈ ಡಿವೈಸ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸರಬೇಕು. ಮೊಬೈಲ್ ಫೋನ್ಗಳನ್ನು ಕಳೆದುಕೊಂಡಾಗ ಕಡ್ಡಾಯವಾಗಿ ಇ–ಲಾಸ್ಟ್/ ಸಿಇಐಆರ್ ಪೋರ್ಟಲ್ನಲ್ಲಿ ದೂರು ದಾಖಲಿಸಬೇಕು’ ಎಂದು ಶರಣಪ್ಪ ಸಲಹೆ ನೀಡಿದರು.

‘ಸಾರ್ವಜನಿಕರೂ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಯಾವುದೇ ಕಡೆಗೂ ದಾಖಲೆಗಳು ಇಲ್ಲದ, ಕಡಿಮೆ ಬೆಲೆಗೆ ಸಿಗುವ ಮೊಬೈಲ್ ಫೋನ್ಗಳನ್ನು ಖರೀದಿಸಬಾರದು. ಅಪರಿಚಿತರು ಕಡಿಮೆ ದರಕ್ಕೆ ಮಾರುವ ಮೊಬೈಲ್ಗಳು, ಕದ್ದ ವಸ್ತುಗಳಾಗಿರಬಹುದು. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಶಾಲೂ, ಪ್ರವೀಣ ನಾಯಕ, ಎಸಿಪಿಗಳಾದ ಶರಣಬಸಪ್ಪ ಸುಬೇದಾರ, ಜೇಮ್ಸ್ ಮಿನೇಜಸ್, ಬಸವೇಶ್ವರ ಹೀರಾ, ಇನ್ಸ್ಪೆಕ್ಟರ್ಗಳಾದ ವಾಜೀದ್ ಪಟೇಲ್, ಸತೀಶ ಕಣಮೇಶ್ವರ, ಸುಶೀಲಕುಮಾರ, ಅರುಣಕುಮಾರ, ನಟರಾಜ ಲಾಡೆ, ಚಂದ್ರಶೇಖರ ತಿಗಡಿ, ಗುರುಲಿಂಗಪ್ಪ ಪಾಟೀಲ, ಹುಸೇನ್ ಬಾಷಾ, ಖಾಜಾ ಹುಸೇನ್ ಸೇರಿದಂತೆ ಹಲವರು ವೇದಿಕೆಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-34-1089671419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.