ಕಲಬುರಗಿ: ‘ನಮ್ಮ ದೊಡ್ಡಪ್ಪ ಅನಿಲ್ ನಮೋಶಿ, ಅವರ ಪತ್ನಿ ಅನ್ನಪೂರ್ಣ ಹಾಗೂ ಪುತ್ರ ಗಂಗಾಧರ ಸೇರಿಕೊಂಡು ನಮ್ಮ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರ ಪುತ್ರ ಪ್ರಫುಲ್ ನಮೋಶಿ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ.

‘ಈ ಮೂವರು ಸೇರಿಕೊಂಡು ನಾವು 25 ವರ್ಷಗಳಿಂದ ನೆಲೆಸಿರುವ ಆನಂದ ನಗರದ ಮನೆಗೆ ಮೇ 10ರಂದು ಮಧ್ಯಾಹ್ನ 1.30ರ ಹೊತ್ತಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅಕ್ರಮವಾಗಿ ಯಾಕೆ ಪ್ರವೇಶಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಗಂಗಾಧರ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿದರು. ಆಗ ನಾನು, ನನ್ನ ಪತ್ನಿ, ನಮ್ಮ ಅಮ್ಮ, ಅಜ್ಜಿ ಬಾಗಿಲ ಚಿಕಲ ಹಾಕಿಕೊಂಡು ರಕ್ಷಣೆ ಪಡೆದಿದ್ದೇವೆ’ ಎಂದು ದೂರಿನಲ್ಲಿ ಪ್ರಫುಲ್ ನಮೋಶಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.