ಕಲಬುರಗಿ: ‘ಕುಂಭಕರ್ಣ 6 ತಿಂಗಳು ಮಲಗಿದರೂ ಮತ್ತೆ 6 ತಿಂಗಳಾದರೂ ಎಚ್ಚರವಾಗಿರುತ್ತಿದ್ದ. ಆದರೆ, ಹಿಂದೂ ಧರ್ಮ ಅಪಾಯದಲ್ಲಿದ್ದರೂ ಹಿಂದೂ ಸಮಾಜ ಮಲಗಿದೆ, ಎಚ್ಚರಗೊಳ್ಳುತ್ತಿಲ್ಲ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದ ಕಡಗಂಚಿ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀರಾಮ ಸೇನೆ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇರಾನ್ ಅಧ್ಯಕ್ಷರು ಸತ್ತರೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲಿಪುರದ ಮುಸ್ಲಿಮರು ಪ್ರತಿಭಟನೆ ಮಾಡಿದರು. ಇದು ದೇಶದ್ರೋಹದ ಕೃತ್ಯ. ಇರಾನ್–ಭಾರತ ಯುದ್ಧವಾದರೆ ಈ ದೇಶದ ಮುಸ್ಲಿಮರು ಯಾರ ಪರ ಎಂದು ಈಗಲೇ ಬಹಿರಂಗವಾಗಿ ಸೂಚನೆ ಕೊಟ್ಟಿದ್ದಾರೆ’ ಎಂದರು.

‘ಶಿವಾಜಿ, ಗಣೇಶ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆದಿದೆ. ಪೆಹಲ್ಗಾಮ್ ದಾಳಿಯಲ್ಲಿ 26 ಹಿಂದೂಗಳನ್ನು ಕೊಂದರು. ಹಿಂದೂಗಳ ಮೇಲೆ ದೌರ್ಜನ್ಯ, ಕೊಲೆ, ಲವ್ ಜಿಹಾದ್ ನಡೆಯುತ್ತಿದೆ. ಆದರೂ ಹಿಂದೂಗಳು ಮಲಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶ್ರೀರಾಮ ಸೇನೆ ಕಳೆದ 21 ವರ್ಷಗಳಿಂದ ಹಿಂದೂ ಸಮಾಜವನ್ನು ಒಗ್ಗೂಡಿಸಲು ಮತ್ತು ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ಈ ನಡುವೆ ಅನೇಕರು ಬಂದುಹೋದರೂ ಸಂಘಟನೆ ನಿರಂತರವಾಗಿ ನಡೆಯುತ್ತಿದೆ’ ಎಂದು ತಿಳಿಸಿದರು.

ಚಿತ್ತಾಪುರದಲ್ಲಿ ನಡೆದ ಆರ್ಎಸ್ಎಸ್ ಪಥಸಂಚಲನದ ಘಟನೆ ಪ್ರಸ್ತಾಪಿಸಿದ ಮುತಾಲಿಕ್, ‘ನಿಮ್ಮ ಕ್ಷೇತ್ರದಲ್ಲಿ ಇಸ್ಪೀಟ್, ಕೊಲೆ, ಸುಲಿಗೆ, ದರೋಡೆ ನಡೆಯುತ್ತಿದ್ದರೂ ಕಾಣುತ್ತಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

‘ನನ್ನ ಮೇಲೆ 121 ಕೇಸ್ ದಾಖಲಾಗಿವೆ. ಸಾವಿರ ಕೇಸ್ ಆದರೂ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ನಮ್ಮ ಧರ್ಮದ ಶಸ್ತ್ರಪೂಜೆ ಸಂಪ್ರದಾಯ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ’ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಚಡಚಣದ ಭಾಗ್ಯ ಗೌಡ, ‘ಹಿಂದೂ ಯುವಕರು ದೇಶದ ರಕ್ಷಣೆಗೆ ಕೈಜೋಡಿಸಬೇಕು. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕೊಡುವುದು ತಾಯಿ. ಆದ್ದರಿಂದ, ಧರ್ಮ ರಕ್ಷಣೆಯಲ್ಲಿ ಪುರುಷರಿಗಿಂತ 10 ಪಟ್ಟು ಹೆಚ್ಚು ಹೆಣ್ಣುಮಕ್ಕಳ ಮೇಲೆ ಜವಾಬ್ದಾರಿ ಇದೆ’ ಎಂದರು.

ಶ್ರೀರಾಮ ಸೇನೆಯ ಕಾನೂನು ಸಲಹೆಗಾರ, ವಕೀಲ ಶಿವಕುಮಾರ್ ಸೀರಿ ಮಾತನಾಡಿ, ‘ಹಿಂದುತ್ವ, ಧರ್ಮ ರಕ್ಷಣೆಗೆ ಸಂಬಂಧಿತ ಯಾವುದೇ ಕಾನೂನು ತೊಡಕು, ಕೇಸ್ಗಳಾದರೆ ಉಚಿತವಾಗಿ ಸೇವೆ ಕೊಡುತ್ತೇನೆ’ ಎಂದು ತಿಳಿಸಿದರು.

ಮಕ್ತಂಪುರದ ಚರಲಿಂಗ ಶಿವಾಚಾರ್ಯರು, ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರು, ದತ್ತ ಮಂದಿರದ ದೀಪಕ ಘನಾತೆ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ಎಂ.ಎಸ್.ಪಾಟೀಲ ನರಿಬೋಳ, ಚನ್ನಯ್ಯ ವಸ್ತ್ರದ ಜೇರಟಗಿ, ರಾಜು ಭವಾನಿ, ವೀರೇಶ ಪಾಟೀಲ, ಆನಂದ ದೇಸಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-34-1453107510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.