ಕಲಬುರಗಿ: ಪತಿಯ ಕಿರುಕುಳಕ್ಕೆ ಬೇಸತ್ತ ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ತವರು ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಔರಾದ್ (ಬಿ) ಗ್ರಾಮದಲ್ಲಿ ನಡೆದಿದೆ.

ಶ್ರುತಿ ಗೋಪಾಲಸಿಂಗ್ ತಿವಾರಿ (24) ಮೃತರು. ಶ್ರುತಿ ಹಾಗೂ ಗೋಪಾಲಸಿಂಗ್ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ವಿವಾಹವಾದ 3 ತಿಂಗಳ ಬಳಿಕ ಪತಿ ಗೋಪಾಲ ಕುಡಿತ, ಜೂಜಾಟದಂಥ ವ್ಯಸನಗಳಿಗೆ ದಾಸ ನಾಗಿದ್ದ. ತನ್ನ ಜಮೀನನ್ನೂ ಮಾರಾಟ ಮಾಡಿದ್ದಲ್ಲದೇ ಲಕ್ಷಾಂತರ ರೂಪಾಯಿ ಸಾಲವನ್ನೂ ಮಾಡಿದ್ದ ಎನ್ನಲಾಗಿದೆ.

ಸಾಲ ತೀರಿಸಲು ಗೋಪಾಲ ನೆಲೆಸಿದ್ದ ಮನೆ ಮಾರಾಟಕ್ಕೂ ಮುಂದಾಗಿದ್ದ. ಇದನ್ನು ಒಪ್ಪದ ಶ್ರುತಿ ಸಹಿ ಹಾಕಲು ನಿರಾಕರಿಸಿದ್ದರು. ಆಗ ಗೋಪಾಲ ಕೌರ್ಯ ಮೆರೆದಿದ್ದರಿಂದ ಬೇಸತ್ತು ತವರು ಮನೆಗೆ ಬಂದು ನೆಲೆಸಿದ್ದರು.

ತವರು ಮನೆಯಲ್ಲಿದ್ದ ಶ್ರುತಿ ಬಳಿಗೆ ಬುಧವಾರ ಬಂದಿದ್ದ ಪತಿ ಗೋಪಾಲ ಗಲಾಟೆ ಮಾಡಿದ್ದ. ಇದರಿಂದ ನೊಂದು ಬುಧವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಗೋಪಾಲನನ್ನು ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪತಿಯ ವಿರುದ್ಧ ವರದಕ್ಷಿಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಪೊಲೀಸ್ ಸಾವು: ಕಲಬುರಗಿ ನಗರದ ಹೊರವಲಯದ ಕಲಬುರಗಿ ಸೆಂಟ್ರಲ್ ಜೈಲ್ ಸಮೀಪದ ಸರಕು ಸಾಗಣೆ ಮಿನಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾನ್ಸ್ಟೆಬಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿದ್ದ ಶ್ರೀಶೈಲ (31) ಮೃತರು. ಇವರು ಮೂಲತಃ ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದವರು.

ಶ್ರೀಶೈಲ ಬುಧವಾರ ಜೇವರ್ಗಿ ತಾಲ್ಲೂಕಿನಲ್ಲಿರುವ ತಮ್ಮ ಸಹೋದರಿಯ ಮನೆಗೆ ಭೇಟಿ ನೀಡಿ ಅಲ್ಲಿಂದ ಮರಳಿ ಬೈಕ್ನಲ್ಲಿ ಸ್ವಗ್ರಾಮ ಹಾಗರಗುಂಡಗಿಗೆ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕಲಬುರಗಿ ಸಂಚಾರ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-34-11679621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.