ಕಲಬುರಗಿ: ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾಗಲು ಅರ್ಹತೆ ಪಡೆದಿದ್ದರೂ ದಂಡದ ಹಣ ಕಟ್ಟಲಾಗದ್ದರಿಂದ ಜೈಲಿನಲ್ಲಿಯೇ ಉಳಿದಿದ್ದ ಕೇಂದ್ರ ಕಾರಾಗೃಹದ ಬಂದಿ ರಮೇಶ್ ಶಿವರಾಯ ಕಲಗುರ್ತಿ ಅವರಿಗೆ ವಿಧಿಸಲಾದ ₹18 ಸಾವಿರ ದಂಡದ ಹಣವನ್ನು ಜಮೀಯತ್ ಉಲಮಾ ಸೊಸೈಟಿ ಪಾವತಿಸಿದೆ.

ಸಂಸ್ಥೆಯ ಪ್ರಭಾರ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಅವರು, ಬಂದಿ ರಮೇಶ್ ದಂಡದ ಹಣ ಕಟ್ಟಲು ಅರ್ಥಿಕ ದುರ್ಬಲನಾಗಿದ್ದು, ಹಣ ಹೊಂದಿಸಲು ಸಾಧ್ಯವಾಗಿರುವುದಿಲ್ಲ. ಸದರಿ ಮೊತ್ತವನ್ನು ಪಾವತಿಸಲು ಕೋರಿದ್ದರು. ಅದರಂತೆ ಜಮೀಯತ್ ಉಲಮಾ ಸೊಸೈಟಿ ಅವರು ಬಂದಿ ದಂಡದ ಹಣವನ್ನು ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.

ಈ ವೇಳೆ ಸೊಸೈಟಿ ಮಹ್ಮದ್ ಶರೀಫ್, ಮಹ್ಮದ್ ವಾಜೀದ್, ಸಯ್ಯಾದ್ ಸಾದಿಕ್, ಜಾಕಿಯೂದ್ದೀನ್, ಕಾರಾಗೃಹದ ಜೈಲರ್ಗಳಾದ ಸಾಗರ ಪಾಟೀಲ, ಶ್ರೀಮಂತಗೌಡ ಪಾಟೀಲ, ಸಂಸ್ಥೆಯ ಮುಖ್ಯ ವೀಕ್ಷಕ ಸಲೀಂ ಮುಲ್ಲಾ ಹಾಗೂ ಸಂಸ್ಥೆಯ ಶಿಕ್ಷಕ ನಾಗರಾಜ ಮೂಲಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.