ಕಲಬುರಗಿ: ‘ದೇಶದಲ್ಲಿ ಅದಾನಿ, ಅಂಬಾನಿಗೆ ಮಾತ್ರವೇ ವಿಕಸಿತ ಭಾರತ, ಅಮೃತಕಾಲವಿದೆ. ದೇಶದ ಬಡಜನರ ಸಂಕಷ್ಟ ಇಂದಿಗೂ ತಪ್ಪಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಕುಡಾ) ಸೋಮವಾರ ಹಮ್ಮಿಕೊಂಡಿದ್ದ ₹11.99 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದಲ್ಲಿ ನಿರುದ್ಯೋಗ ಏರುಗತಿಯಲ್ಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಿದೆ. ಎಲ್ಪಿಜಿ ತುಟ್ಟಿಯಾಗಿದೆ. ಕಡಿಮೆ ಊಟ ಮಾಡಿ, ಬಂಗಾರ ಖರೀದಿಸಬೇಡಿ ಎಂದು ಖುದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳುತ್ತಿದ್ದಾರೆ. ಇದು ವಿಕಸಿತ ಭಾರತವೇ? ಅಮೃತ ಕಾಲವೇ? ಇವು ಪ್ರಧಾನಿ ಆಡುವ ಮಾತುಗಳೇ?’ ಎಂದು ಪ್ರಶ್ನಿಸಿದರು.

‘ಮೋದಿ ಪ್ರಧಾನಿಯಾಗಿ 12 ವರ್ಷಗಳಾಗಿವೆ. ವಿಶ್ವಗುರು ಎಂದೆಲ್ಲ ಮಾತನಾಡುತ್ತಾರೆ. ಆದರೆ, ಒಂದು ಪ್ರಶ್ನೆಗೂ ಉತ್ತರಿಸಲ್ಲ. ಸಂಸತ್ತು ಹಾಗೂ ಮಾಧ್ಯಮಗಳಿಂದಲೂ ದೂರ ಓಡಿ ಹೋಗುತ್ತಾರೆ. ಹಾಗಾದರೆ ದೇಶದ ಹೊಣೆ ಯಾರು ಹೊರಬೇಕು?’ ಎಂದು ಕೇಳಿದರು.

‘ಕಲಬುರಗಿಯಲ್ಲಿ ನೀರು ಬರದಿದ್ದರೆ, ರಸ್ತೆ ಸರಿಯಿಲ್ಲದಿದ್ದರೆ, ವಿದ್ಯಾರ್ಥಿಗಳ ಫಲಿತಾಂಶ ಕುಸಿದರೂ ಬಿಜೆಪಿಯವರ ನನ್ನನ್ನೇ ಟೀಕಿಸುತ್ತಾರೆ’ ಎಂದರು.

‘ಮೋದಿ ಹಾಗೂ ಬಿಜೆಪಿ ಎಲ್ಲ ಭಾರವನ್ನೂ ನಾಗರಿಕರ ಮೇಲೆ ಹಾಕುವ ಕಲೆ ಕಲಿತಿದೆ. ಕೋವಿಡ್ ಬಂದಾಗ ನಿರ್ವಹಣೆ ಮಾಡಬೇಕಿದ್ದ ಮೋದಿ, ನಿಮ್ಮಿಂದ ದೀಪ ಬೆಳಗಿಸಿದರು, ಜಾಗಟೆ ಬಾರಿಸಲು ಹಚ್ಚಿದರು. ನೋಟು ರದ್ದತಿ ಮಾಡಿ ಎಲ್ಲ ಕಪ್ಪುಹಣ ವಾಪಸ್ ತರುವುದಾಗಿ ಹೇಳಿದರು. ಅದು ಏನಾಯ್ತು? ಬಡವರೇ ಕಷ್ಟ ಎದುರಿಸಿದರು. ಇದೀಗ ರೂಪಾಯಿ ಮೌಲ್ಯ ಕುಸಿದಿದೆ. ಪೆಟ್ರೋಲ್, ಡೀಸೆಲ್ ತುಟ್ಟಿಯಾಗಿದೆ. ಅದರ ಭಾರವನ್ನೂ ಮೋದಿ ನಾಗರಿಕರ ಮೇಲೆ ಹಾಕಿದ್ದಾರೆ. ನೀವು ಕಡಿಮೆ ಓಡಾಡಿ, ಊಟ ಕಡಿಮೆ ಮಾಡಿ, ಬಂಗಾರ ಖರೀದಿಸಬೇಡಿ ಎಂದು ನಾಗರಿಕರಿಗೇ ಹೇಳುತ್ತಾರೆ. ದೇಶದ ಮುನ್ನಡೆಸುವವರು ಹೊಣೆ ಗಾರಿಕೆ ತೆಗೆದುಕೊಳ್ಳದೇ ದೇಶದ ನಾಗರಿಕರನ್ನು ಶ್ರೀರಾಮನ ಭರವಸೆ ಮೇಲೇ ಬಿಟ್ಟುಬಿಟ್ಟಿದ್ದಾರೆ’ ಎಂದರು.

ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್ ಮಾತನಾಡಿ, ‘ಸಚಿವ ಪ್ರಿಯಾಂಕ್ ಮಾರ್ಗದರ್ಶನದಲ್ಲಿ ಕಲಬುರಗಿಯ ಸೌಂದರ್ಯೀಕರಣ, ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶೀಘ್ರವೇ ನಗರದಲ್ಲಿ ಐದು ಕಡೆ ಜಿಮ್ ಸಲಕರಣೆ, ಮಿನಿ ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್ ಮೈದಾನಗಳನ್ನು ಒಳಗೊಂಡ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಪಾಲಿಕೆ ಮೇಯರ್ ವರ್ಷಾ ಜಾನೆ, ಉಪಮೇಯರ್ ತೃಪ್ತಿ ಲಾಖೆ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜಿಲ್ಲಾಧಿಕಾರಿ ಇಕ್ರಂ ಷರೀಫ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಕುಡಾ ಆಯುಕ್ತ ಶೈಲೇಂದ್ರ ಸಿಂಗ್ ಸೇರಿ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-34-61703586

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.