ಕಲಬುರಗಿ: ನಗರದ ಕೆಬಿಎನ್ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿಯೊಬ್ಬರಿಗೆ ಸಹಾಯಕ ಪ್ರಾಧ್ಯಾಪಕರೊಬ್ಬರು ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

‘ಸಹಾಯಕ ಪ್ರಾಧ್ಯಾಪಕ ಸೈಯದ್ ಅಬ್ರಾರ್ ನಾಲ್ಕು ವರ್ಷದಿಂದ ಪರಿಚಯ. ತನ್ನ ಮನೆಯ ಅಡಚಣೆಗಾಗಿ 2024ರಲ್ಲಿ ₹50 ಸಾವಿರ, 2025ರಲ್ಲಿ ₹70 ಸಾವಿರ ಹಣ ಪಡೆದಿದ್ದ. ಮುಂದೆ ಬರುಬರುತ್ತ ಸೈಯದ್ ಅಬ್ರಾರ್ ನನ್ನೊಂದಿಗೆ ಸಲುಗೆಯಿಂದ ಮಾತನಾಡುವುದು, ನನ್ನ ಹಿಂದೆ ಬೀಳುವುದು ಮಾಡುತ್ತಿದ್ದ. ಮನೆಯ ಹತ್ತಿರ ಬಂದು ಮಾನಸಿಕ ಕಿರುಕುಳ ನೀಡುತ್ತಿದ್ದ. ಕೆಟ್ಟದಾಗಿ ನೋಡುವುದು, ಅಶ್ಲೀಲ ಪದ ಬಳಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕಳೆದ ಏಪ್ರಿಲ್ 3ರಂದು ಬೆಳಿಗ್ಗೆ 6 ಗಂಟೆಗೆ ಮನೆ ಎದುರು ಬಂದು ಅವಾಚ್ಯವಾಗಿ ಬೈದು, ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ’ ಎಂದು ನಗರದ ವೀರೇಂದ್ರ ಪಾಟೀಲ ಬಡಾವಣೆಯ ನಿವಾಸಿ, ಸಹಾಯಕ ಪ್ರಾಧ್ಯಾಪಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನನ್ವಯ ಸೈಯದ್ ಅಬ್ರಾರ್ ವಿರುದ್ಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಮಹಿಳೆಯೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಆ ಮಹಿಳೆಯ ಸಮುದಾಯದ ಕೆಲವರು ತೀವ್ರವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.

ತಾಲ್ಲೂಕಿನ ಕುಮಸಿ ಗ್ರಾಮದ ಬೀರಪ್ಪ ಶರಣಪ್ಪ ಹಿರೇಕುರುಬರ ಗಂಭೀರವಾಗಿ ಗಾಯಗೊಂಡವರು. ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

‘ನನ್ನ ಗಂಡ ಬೀರಪ್ಪ ಮೇ 1ರಂದು ರಾತ್ರಿ 9 ಗಂಟೆಗೆ ಕುಡಿದು ಮನೆಗೆ ಬಂದಿದ್ದ. ಯಾಕೆ ಕುಡಿದು ಬಂದಿದ್ದೀರಿ? ಎಂದು ಪ್ರಶ್ನಿಸಿದೆ. ನನ್ನೊಂದಿಗೆ ವಾಗ್ವಾದ ಮಾಡಿ ಮನೆಯಿಂದ ಹೊರ ಹೋದ. ನಶೆ ಇಳಿದ ಬಳಿಕ ಬರಬಹುದು ಎಂದು ಸುಮ್ಮನಾದೆ. ಮೇ 2ರಂದು ಬೆಳಿಗ್ಗೆ 10 ಗಂಟೆ ಹೊತ್ತಿಗೆ ನನ್ನ ಗಂಡನ ಸಹೋದರಿ ಜಗದೇವಿ ಕಲಬುರಗಿಯಿಂದ ಕುಮಸಿಗೆ ಬಂದಳು. ಬೀರಪ್ಪನಿಗೆ ಯಾರೋ ಹೊಡೆದು ಬಿಸಾಕಿ ಹೋಗಿದ್ದಾರೆ ಎಂದು ತಿಳಿಸಿದಳು. ನಾವೆಲ್ಲ ಹೋಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿದೆವು. ಬಳಿಕ ಗಂಡನಿಗೆ ಪ್ರಜ್ಞೆ ಬಂದಿದ್ದು, ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಆ ಮಹಿಳೆಯ ಸಮುದಾಯದವರು ಹಲ್ಲೆ ನಡೆಸಿದ್ದಾರೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕುಮಸಿ ಗ್ರಾಮದ ಶಾಂತಾಬಾಯಿ ತಿಳಿಸಿದ್ದಾರೆ. ಈ ದೂರಿನನ್ವಯ ನಾಲ್ವರ ವಿರುದ್ಧ ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-34-156627410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.