ಕಲಬುರಗಿ: ಅಧಿಕಮಾಸದ ಅಂಗವಾಗಿ ಲೋಕಕಲ್ಯಾಣ, ವಿಶ್ವಶಾಂತಿ ಹಾಗೂ ಸನಾತನ ಧರ್ಮದ ಪ್ರಚಾರದ ಉದ್ದೇಶದಿಂದ ಕರುಣೇಶ್ವರ ನಗರದ ಜೈವೀರ ಹನುಮಾನ್ ಮಂದಿರದಲ್ಲಿ ಜೂ.5ರಂದು ಪುರುಷೋತ್ತಮ ಸತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ರಮಾಕಾಂತ ಜೋಶಿ ತಿಳಿಸಿದ್ದಾರೆ.

ಕಾರ್ಯಕ್ರಮವು ಬೆಳಿಗ್ಗೆ 6 ಗಂಟೆಗೆ ಹನುಮಂತ ದೇವರಿಗೆ 33 ಕೆ.ಜಿ ಮಾವಿನ ಹಣ್ಣಿನ ಅಭಿಷೇಕದೊಂದಿಗೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಗಂವ್ಹಾರದ ಸೋಪಾನನಾಥ ಸ್ವಾಮೀಜಿ, ಆನೆಗುಂದಿಯ ಸುರೇಂದ್ರ ಸ್ವಾಮೀಜಿ ಅವರಿಂದ ಧರ್ಮಧ್ವಜಾರೋಹಣ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ನಾರಾಯಣ ಅಷ್ಟಾಕ್ಷರಿ ಮಹಾಮಂತ್ರ ಜಪ ಆರಂಭವಾಗಲಿದ್ದು, ಹುಣಸಗಿಯ ಉಮಾಕಾಂತ ಮಹಾರಾಜ್ ಸಾನ್ನಿಧ್ಯದಲ್ಲಿ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ನಾರಾಯಣ ಅಷ್ಟಾಕ್ಷರಿ ಮಹಾಮಂತ್ರ ಹೋಮ ಮತ್ತು ವಿಷ್ಣು ಪಂಚಾಯತನ ಯಾಗ ನೆರವೇರಲಿದ್ದು, ಸುರಪುರ ಪಂಚಾಂಗದ ಕರ್ತೃ ಕೇದಾರನಾಥ್ ಶಾಸ್ತ್ರಿ ಯಾಳಗಿಕರ್, ಸೇಡಂನ ಸಂತೋಷ ಸ್ವಾಮಿ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಗಂಟೆಗೆ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-34-200582103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.