ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಗೋಲ್ಡ್ ಟೆಸ್ಟಿಂಗ್ ಕೇಂದ್ರದ ಮೇಲೆ ದಾಳಿ

Last Updated 13 ಜುಲೈ 2022, 2:09 IST
ಅಕ್ಷರ ಗಾತ್ರ

ಕಲಬುರಗಿ: ಭಾರತೀಯ ಮಾಪಕ ಬ್ಯುರೊದ (ಬಿಐಎಸ್) ಹಾಲ್‌ ಮಾರ್ಕ್ ದುರ್ಬಳಕೆ ಮಾಡಿಕೊಂಡು ನಕಲಿ ಪ್ರಮಾಣಪತ್ರಗಳನ್ನು ನೀಡಿ ವಂಚಿಸುತ್ತಿದ್ದ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದ ಗಾಜಿಪುರದ ಸರಾಫ ಬಜಾರ್ ಸಮೀಪದ ಶೋಭಾ ಟೆಸ್ಟಿಂಗ್ ಅಂಡ್ ಹಾಲ್‌ ಮಾರ್ಕಿಂಗ್ ಕೇಂದ್ರದ ಮೇಲೆ ಮಂಗಳವಾರ ಬಿಐಎಸ್ ಹುಬ್ಬಳ್ಳಿ ಕಚೇರಿಯ ಅಧಿಕಾರಿಗಳು ದಾಳಿ ನಡೆಸಿದರು. ಹಾಲ್ ಮಾರ್ಕ್ ಮಾಡಲು ಬಳಸುತ್ತಿದ್ದ ಲೇಸರ್ ಯಂತ್ರಗಳು ಹಾಗೂ ಫಲಕಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಐಎಸ್ ಹುಬ್ಬಳ್ಳಿ ವಲಯದ ನಿರ್ದೇಶಕ ಹಾಗೂ ಮುಖ್ಯಸ್ಥ ಡಿ.ಪಿ.ಕುಮಾರ್ ಅವರ ನಿರ್ದೇಶನದ ಮೇರೆಗೆ ದಾಳಿ ನಡೆಸಿದ ಜಂಟಿ ನಿರ್ದೇಶಕ ರಾಕೇಶ್ ತಣ್ಣೀರು ಹಾಗೂ ತಂಡದವರು ಮುದ್ರಿತ ಲೆಟರ್‌ ಹೆಡ್‌, ಸೈನ್ ಬೋರ್ಡ್ ಹಾಗೂ ಆಭರಣಗಳ ಮೇಲೆ ಹಾಲ್ ಮಾರ್ಕ್ ಹಾಕಲು ಬಳಸುತ್ತಿದ್ದ ಯಂತ್ರವನ್ನು ವಶಪಡಿಸಿಕೊಂಡರು.

‘ಈ ಸಂಸ್ಥೆಗೆ ಬಿಐಎಸ್ ಮಾನ್ಯತೆ ಇಲ್ಲ. ಆದರೂ, ಅಕ್ರಮವಾಗಿ ಪ್ರಮಾಣಪತ್ರವನ್ನು ನೀಡುತ್ತಿತ್ತು. ಇದು ಬಿಐಎಸ್ ಕಾಯ್ದೆ 2016ರ ಉಲ್ಲಂಘನೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಅಪರಾಧ ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ದಂಡ ವಿಧಿಸಲು ಅವಕಾಶವಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT