ಕಲಬುರಗಿ: ಮಳೆ ಪ್ರಮಾಣದ ನೈಜ ಸಮಯದ ಮಾಹಿತಿ ಒದಗಿಸಿ, ಬೆಳೆ ವಿಮೆ, ಪರಿಹಾರ ವಿತರಣೆ, ಪ್ರವಾಹ, ಬರ ಪರಿಸ್ಥಿತಿ ನಿಭಾಹಿಸಲು ನೆರವಾಗಲಿ ಎಂಬ ಉದ್ದೇಶದಿಂದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ಅರ್ಧದಷ್ಟು ಸ್ಥಗಿತಗೊಂಡಿವೆ!

ರಾಜ್ಯದಲ್ಲಿ 6,715 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ 1,239 ಕೇಂದ್ರಗಳಿವೆ. ಕೇವಲ 505 ಕೇಂದ್ರಗಳು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಮಾಹಿತಿ ರವಾನಿಸುತ್ತಿವೆ. 734 ಕೇಂದ್ರಗಳಲ್ಲಿ ಸಲಕರಣೆಗಳು ತುಕ್ಕು ಹಿಡಿದು ನಿಂತಿವೆ.

ಕಲಬುರಗಿಯಲ್ಲಿಯೇ ಹೆಚ್ಚು ನಿಷ್ಕ್ರಿಯ: ಕಲ್ಯಾಣ ಕರ್ನಾಟಕದ ಕಂದಾಯ ವಿಭಾಗದ ಸ್ಥಾನ ಹೊಂದಿರುವ ಕಲಬುರಗಿ ಜಿಲ್ಲೆ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, ಇಲ್ಲಿ 281 ಕೇಂದ್ರಗಳಿವೆ. ಬೀದರ್ 197, ರಾಯಚೂರು 195, ಕೊಪ್ಪಳ 169 ಹಾಗೂ ವಿಜಯನಗರ 150 ಕೇಂದ್ರಗಳನ್ನು ಹೊಂದಿದೆ.

ಕಲಬುರಗಿ ಜಿಲ್ಲೆಯಲ್ಲಿ 147, ಬೀದರ್ 136, ವಿಜಯನಗರ 113, ಕೊಪ್ಪಳ 112, ರಾಯಚೂರು 89, ಬಳ್ಳಾರಿ 72, ಯಾದಗಿರಿಯಲ್ಲಿ 65 ಕೇಂದ್ರಗಳು ದುರಸ್ತಿಗಾಗಿ ಎದುರು ನೋಡುತ್ತಿವೆ.

ಕೆಲವು ಕೇಂದ್ರ ಗಳು ಸ್ಥಾಪನೆ ಮಾಡಿದಾಗಿನಿಂದಲೂ ಬಾಗಿಲು ತೆರೆದಿಲ್ಲ.

ಇನ್ನೂ ಕೆಲವು ನಿಖರವಾದ ಮಾಹಿತಿ ನೀಡುವುದಿಲ್ಲ ಎಂದು ರೈತರು ಆರೋ ಪಿಸುತ್ತಾರೆ.

ಕಾರ್ಯನಿರ್ವಹಣೆ ಹೇಗೆ?: ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳು ಯಂತ್ರಗಳ ಸಹಾಯದಿಂದ ಸ್ವಯಂ ಚಾಲಿತವಾಗಿ 15 ನಿಮಿಷ ಗಳಿಗೊಮ್ಮೆ ಮಳೆಯ ಪ್ರಮಾಣ, ತಾಪಮಾನ, ಆರ್ದ್ರತೆ, ಗಾಳಿಯ ವೇಗ ಹಾಗೂ ದಿಕ್ಕನ್ನು ಅಳೆಯುತ್ತವೆ. ಬಳಿಕ ಜಿಪಿಆರ್ಎಸ್ ಮೂಲಕ ದತ್ತಾಂಶವನ್ನು ನಿಯಂ ತ್ರಣ ಕೇಂದ್ರಗಳಿಗೆ ರವಾನೆ ಮಾಡುತ್ತವೆ. ಸೌರಶಕ್ತಿ ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.

‘ಎಲ್ಲ ಕೇಂದ್ರಗಳನ್ನೂ ದುರಸ್ತಿ ಮಾಡಿಸಿ’

‘ಗ್ರಾಮೀಣ ಭಾಗದಲ್ಲಿ ಮಳೆ ಮಾಪನ ಕೇಂದ್ರಗಳು ನಿಷ್ಕ್ರಿಯವಾಗಿವೆ. ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಇವುಗಳನ್ನು ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿ ಕಲಬುರಗಿ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಪ್ರತಿಭಟನೆ ನಡೆಸಿದ್ದೆವು. ಹಿಂದಿನ ಜಿಲ್ಲಾಧಿಕಾರಿ ದುರಸ್ತಿ ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ದುರಸ್ತಿ ಮಾಡಿಸಲಿಲ್ಲ’ ಎಂದು ರೈತ ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.

‘ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ಕೇಂದ್ರಗಳನ್ನು ಒಂದೇ ಬಾರಿ ದುರಸ್ತಿ ಮಾಡಿಸಬೇಕು. ರೈತರಿಗೆ ಮಳೆ ಪ್ರಮಾಣದ ಸಮರ್ಪಕ ಮಾಹಿತಿ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಕಲಬುರಗಿಯಲ್ಲಿ 24 ಕೇಂದ್ರ ದುರಸ್ತಿ’

‘ಕಲಬುರಗಿ ಜಿಲ್ಲೆಯಲ್ಲಿ ದುರಸ್ತಿಗೆ ಬಂದಿರುವ ಕೇಂದ್ರಗಳ ಕುರಿತು ಇಲಾಖೆಗೆ ವರದಿ ನೀಡಲಾಗಿದೆ. 24 ಕೇಂದ್ರಗಳ ದುರಸ್ತಿಗೆ ಅನುಮೋದನೆ ಸಿಕ್ಕಿದೆ. ಗುತ್ತಿಗೆ ಪಡೆದ ಕಂಪನಿಯು ಕೇಂದ್ರಗಳ ದುರಸ್ತಿ ಕಾರ್ಯದಲ್ಲಿ ತೊಡಗಿದೆ. ಕೆಲಸ ಮುಗಿಯುವ ಹಂತ ತಲುಪಿದೆ. ಉಳಿದ ಕೇಂದ್ರಗಳನ್ನು ಹಂತ ಹಂತವಾಗಿ ದುರಸ್ತಿ ಮಾಡಿಸಲಾಗುವುದು’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.