ಕಲಬುರಗಿ: ರಾಮ ನವಮಿ ಉತ್ಸವ ಸಮಿತಿಯಿಂದ ಮಾರ್ಚ್ 26ರಂದು 11ನೇ ರಾಮನವಮಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿಯ ಸದಸ್ಯ ಸಚಿನ್ ಕಡಗಂಚಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಜಿಲ್ಲೆಯ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ, ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸೀಮಿತವಾಗಿರದೇ, ಉತ್ಸವ ಸಮಿತಿಗೆ ಅಧ್ಯಕ್ಷ ಇರದೇ ರಾಮನವಮಿ ಉತ್ಸವ ನಡೆಸಲಾಗುತ್ತಿದ್ದು, ಗುರುವಾರ ಬೆಳಿಗ್ಗೆ 10.30ಕ್ಕೆ ರಾಮತೀರ್ಥ ಮಂದಿರದಿಂದ ಜಗತ್ ವೃತ್ತದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ’ ಎಂದು ಹೇಳಿದರು.

‘ರಾಮತೀರ್ಥ ಮಂದಿರದಿಂದ ಖಾದ್ರಿ ಚೌಕ್, ಶಹಾಬಜಾರ ನಾಕಾ ಮಾರ್ಗವಾಗಿ ಸೂಪರ್ ಮಾರ್ಕೆಟ್, ಜನತಾ ಬಜಾರ, ಜಗತ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದೆ. ಜಗತ್ ವೃತ್ತದಲ್ಲಿ ಸಮಾರೋಪ ನಡೆಯಲಿದೆ. ಈ ಬಾರಿ 15 ಅಡಿ ಎತ್ತರದ ರಾಮನ ಮೂರ್ತಿ ಇರಲಿದೆ. ಸಾರ್ವಜನಿಕವಾಗಿ ದೇಣಿಗೆ ಸಂಗ್ರಹಿಸದೇ ಸಮಿತಿ ಸದಸ್ಯರೇ ಹಣ ಹಾಕಿ ಉತ್ಸವ ನಡೆಸುತ್ತಿದ್ದೇವೆ. ಕೊನೆಯಲ್ಲಿ ಖರ್ಚು ಮತ್ತು ಜಮಾ ವಿವರಗಳನ್ನು ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಮಲ್ಲಿನಾಥ ಅವರಾದಿ, ಸಂಜೀವ ಮಿಶ್ರಾ, ಗುರು ಸಾಗರೆ, ಸುದೀಪ ಚಿಂಚೋಳಿ, ಸುರೇಶ, ವಿಶ್ವರಾಧ್ಯ ಮತ್ತಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-34-1934486808

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.