ಕಲಬುರಗಿ: ‘ಕನ್ನಡನಾಡು ರಕ್ಷಣಾ ಪಡೆಯಿಂದ ಮೊದಲ ಬಾರಿಗೆ ರಾಮನವಮಿ ನಿಮಿತ್ತ ರಾಮನ ಮೂರ್ತಿಯ ಶೋಭಾಯಾತ್ರೆಯನ್ನು ಮಾ.26ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಯಾತ್ರೆಯ ಸಂಚಾಲಕ ವಿಶ್ವನಾಥ ಸಾಲಿಮಠ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಕೃಷ್ಣೇಶ್ವರ ದೇವಸ್ಥಾನದಿಂದ ರಾಮಮಂದಿರ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಲಿದ್ದು, ಸಂಜೆ 5.30ಕ್ಕೆ ಚಾಲನೆ ದೊರೆಯಲಿದೆ. ಶ್ರೀನಿವಾಸ ಸರಡಗಿಯ ಶಕ್ತಿಪೀಠದ ಅಪ್ಪಾರಾವ ದೇವಿ ಮುತ್ಯಾ, ಶ್ರೀನಿವಾಸ ಸರಡಗಿಯ ಚಿಕ್ಕವೀರ ಸಂಸ್ಥಾನ ಮಠದ ರೇವಣಸಿದ್ಧ ಶಿವಾಚಾರ್ಯರು, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಯುವ ಮುಖಂಡ ಅಭಿಷೇಕ ಅಲ್ಲಮಪ್ರಭು ಪಾಟೀಲ ಮತ್ತಿತರರು ಚಾಲನೆ ನೀಡಲಿದ್ದಾರೆ’ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಶೋಭಾಯಾತ್ರೆ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿನೋದ ಪಾಟೀಲ, ಪವನ್ ಉದನೂರ, ಶಿವಕುಮಾರ ಹಿರೇಮಠ, ಶಶಿಧರ ವಾರದ, ಶರಣು ಎಸ್.ಕೆ, ಮಲ್ಲಿಕಾರ್ಜುನ ಆವಂಟಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-34-2036244799

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.