‘ಹೆಚ್ಚಿನ ಅನುದಾನ ನೀಡಲಿದ್ದೇವೆ’
‘ಈ ಬಾರಿ ರಾಜ್ಯದ ಎಲ್ಲ ರಂಗಾಯಣಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ನೀಡಲು ತೀರ್ಮಾನಿಸಿದ್ದೇವೆ. ವಿವಿಧ ರಂಗಾಯಣಗಳು ₹ 1 ಕೋಟಿ ವಾರ್ಷಿಕ ಅನುದಾನಕ್ಕೆ ಬೇಡಿಕೆ ಸಲ್ಲಿಸಿವೆ. ಅಷ್ಟೊಂದು ನೀಡಲು ಆಗುವುದಿಲ್ಲ. ಆದರೆ, ಹೆಚ್ಚಿನ ಅನುದಾನ ನೀಡುವ ಮೂಲಕ ರಂಗಾಯಣಗಳನ್ನು ಸಶಕ್ತಗೊಳಿಸಲು ಯತ್ನಿಸುತ್ತೇವೆ. ಕಲಬುರಗಿ ರಂಗಾಯಣಕ್ಕೆ ಹೆಚ್ಚಿನ ಅನುದಾನ ಸೇರಿದಂತೆ ಅಗತ್ಯ ಸಹಕಾರ ನೀಡಲು ಕೆಕೆಆರ್‌ಡಿಬಿಗೆ ಕೋರಿಕೆ ಸಲ್ಲಿಸಿದ್ದೇವೆ. ಮುಂದಿನ ವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.