ಸೋಮವಾರ, ಸೆಪ್ಟೆಂಬರ್ 27, 2021
22 °C
ಕಲಬುರ್ಗಿ ರಂಗಾಯಣದಲ್ಲಿ ಆಯೋಜನೆ

ಕಲಾವಿದರಿಗೆ ರಂಗಾಂತರಾಳ ಸುವರ್ಣ ಅವಕಾಶ: ಕಪನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಲಾವಿದರು ತಮ್ಮ ನೋವು– ನಲಿವುಗಳನ್ನು ಆಸಕ್ತರ ಮುಂದೆ ಹೇಳಿ ಕೊಳ್ಳುವ ಅವಕಾಶವನ್ನು ಕಲಬುರ್ಗಿ ರಂಗಾಯಣ ತನ್ನ ರಂಗಾಂತರಾಳ ಕಾರ್ಯಕ್ರಮದಲ್ಲಿ ನೀಡಿರುವುದು ಸಂತಸ ತಂದಿದೆ. ಅನುಭವ ಕಥನವನ್ನು ದಾಖಲಿಸಲಾಗದ ಕಲಾವಿದರಿಗೆ ಇದು ಸುವರ್ಣ ಅವಕಾಶ’ ಎಂದು ಹಿರಿಯ ಕಲಾವಿದ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ ಹೇಳಿದರು.

ಇಲ್ಲಿಯ ರಂಗಾಯಣದಲ್ಲಿ ಸೋಮವಾರ ಆಯೋಜಿಸಿದ್ದ ರಂಗಾಂತರಾಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾವು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆದು ಬಂದ ಬಗೆಯನ್ನು ವಿವರಿಸಿದರು.

ಬಾಲ್ಯದಿಂದಲೂ ಜಾನಪದ ರಂಗಭೂಮಿಯಿಂದ ಆಕರ್ಷಕನಾಗಿ, ದೊಡ್ಡಾಟ, ಬಯಲಾಟ, ನಾಟಕಗಳಲ್ಲಿ ಭಾಗವಹಿಸಿ, ಜನಪದ ಹಾಡುಗಳನ್ನು ಹೇಳುತ್ತಾ ಬೆಳೆದು ಬಂದಿರುವುದಾಗಿ ತಿಳಿಸಿ, ರಂಗಗೀತೆ ಹಾಡಿ ರಂಜಿಸಿದರು. ದೊಡ್ಡಾಟದ ಹೆಜ್ಜೆ ಹಾಕಿ ತೋರಿಸಿದರು.

ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗಭೂಮಿಯ ಎಲ್ಲ ಪ್ರಕಾರಗಳಲ್ಲಿಯೂ ದುಡಿದ ಕಲಾವಿದರು ತಮ್ಮ ಕಲಾ ಸೇವೆ ಬಗ್ಗೆ ಮತ್ತು ರಂಗಭೂಮಿಯಲ್ಲಿ  ಎದುರಿಸಿದ ಸವಾಲುಗಳನ್ನು ತಿಳಿಸಿದರೆ ಅವು ಯುವ ಕಲಾವಿದರಿಗೆ ಮಾರ್ಗದರ್ಶನವಾಗಬಲ್ಲವು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ, ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ, ಪಟ್ಟಣಕರ್, ಸಾಯಿಬಣ್ಣ ಹೋಳ್ಕರ್, ಎಚ್.ಎಸ್. ಬಸವಪ್ರಭು ಇದ್ದರು.

ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿದರು. ರಂಗಾಯಣ ಕಲಾವಿದರಾದ ಮರಿಯಮ್ಮ ಆದೋನಿ ರಂಗಗೀತೆ ಪ್ರಸ್ತುತ ಪಡಿಸಿದರು. ಮಲ್ಲಿಕಾರ್ಜುನ ಪೂಜಾರಿ, ರಾಜು ತಬಲಾ ಸಾಥ್ ನೀಡಿದರು. ಭಾಗ್ಯ ಪಾಳಾ ನಿರೂ‍ಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.