ಕಲಬುರಗಿ: ‘ಪರಿಶಿಷ್ಟ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿದ ವರದಿಯಲ್ಲಿ ಪರಿಶಿಷ್ಟ ಜಾತಿ ಹೊಲೆಯ ಜಾತಿಗೆ ಸಂಬಂಧಿಸಿದಂತೆ ಜನಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿದುಬಂದಿದ್ದು, ನಿಖರ ಸಂಖ್ಯೆ ತಿಳಿಯಲು ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದಿ) ರಾಜ್ಯ ಸಂಚಾಲಕ ಎಸ್.ಆರ್. ಕೊಲ್ಲೂರು ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1951ರ ಮೈಸೂರು ರಾಜ್ಯದ ಜನಗಣತಿಯಲ್ಲಿ ಭಾರತ ಸರ್ಕಾರದ ರಿಜಿಸ್ಟ್ರಾರ್ ಜನರಲ್ ಕಚೇರಿ ನೀಡಿದ ಅಂದಾಜು ಅಂಕಿ–ಅಂಶಗಳ ಪ್ರಕಾರ ಮೈಸೂರು ರಾಜ್ಯದ ಜನಸಂಖ್ಯೆ 1.94 ಕೋಟಿ. ಇದರಲ್ಲಿ ಹೊಲೆಯರು 9,85,827, ಮಾದಿಗರು 4,26,228. ಈ ಅಂಕಿ ಅಂಶಗಳ ಆಧಾರದ ಮೇಲೆ ಹೇಳುವುದಾದರೆ ಮಾದಿಗರಿಗಿಂತ ಹೊಲೆಯರು ಸುಮಾರು 6,60,000 ಹೆಚ್ಚು ಇರುವುದು ಅಂದಾಜಿಸಲಾಗಿದೆ. ಆದರೆ, ನಾಗಮೋಹನ್ ದಾಸ್ ವರದಿ ಪ್ರಕಾರ ಮಾದಿಗರ ಸಂಖ್ಯೆ 35,99,895 ಮತ್ತು ಹೊಲೆಯರ ಸಂಖ್ಯೆ 34,98,188 ತೋರಿಸಿದ್ದಾರೆ. 1951ರಲ್ಲಿ 6,60,000ರಷ್ಟು ಹೆಚ್ಚಿದ್ದ ಜನಸಂಖ್ಯೆ ಪ್ರತಿವರ್ಷ ಏರಿಕೆಯಾಗುತ್ತಲೇ ಹೋಗಬೇಕು. ಆದರೆ, ಕಡಿಮೆ ಯಾಕಾಯ್ತು ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತನಿಖೆಗೆ ಒಳಪಡಿಸಬೇಕು’ ಎಂದರು.

‘ಒಳಮೀಸಲಾತಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ಜನಸಂಖ್ಯೆ ಹೆಚ್ಚೆಂದು ಪರಿಶಿಷ್ಟರು ಪ್ರತಿಪಾದನೆ ಮಾಡುತ್ತಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗಿ ತೋರಿಸಿದ್ದರಿಂದ ಆ ಸಮುದಾಯ ಸ್ವಾಭಾವಿಕವಾಗಿ ‘ಎ’ ಗುಂಪಿನಲ್ಲಿ ಸೇರಿದ್ದರಿಂದ ರೋಸ್ಪರ್ ಪಾಯಿಂಟ್ ಪ್ರಕಾರ ಮೊದಲು ಅವರಿಗೆ ಆದ್ಯತೆ ಸಿಕ್ಕು ಹೊಲೆಯ ಮತ್ತು ಇತರ ಜಾತಿಗಳಿಗೆ ಕಡಿಮೆ ಪ್ರಾಶಸ್ತ್ಯ ಸಿಗುತ್ತದೆ ಎಂದು ಹೊಲೆಯ ಸಮುದಾಯವು ಹೋರಾಟಕ್ಕೆ ಇಳಿದಿದೆ’ ಎಂದರು.

‘ಹೀಗಾಗಿ ಕಲಹಕ್ಕೆ ಆಸ್ಪದ ಕೊಡದೇ ನಿಖರ ಸಂಖ್ಯೆ ತಿಳಿಯಲು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮರೆಪ್ಪ ಬನಟ್ಟಿ, ಪಾಂಡುರಂಗ ಮದನಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-34-1411722774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.