ಕಲಬುರಗಿಯ ಶಹಬಾದ್ ರಿಂಗ್ ರಸ್ತೆ ಸರ್ಕಲ್ನಿಂದ ಹೊಸ ಆರ್ಟಿಒ ಕಚೇರಿ, ಖರ್ಗೆ ಪೆಟ್ರೋಲ್ ಪಂಪ್, ಹುಮನಾಬಾದ ರಿಂಗ್ ರಸ್ತೆಯಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ. ಇದರಿಂದಾಗಿ ಹೊಸ ಆರ್ಟಿಒ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಮೇಲೆ ದ್ವಿಚಕ್ರ ವಾಹನ ಸವಾರರು ಅಪಘಾತದಿಂದ ಗಾಯಗೊಳ್ಳುತ್ತಿದ್ದಾರೆ. ಎದುರಿಗೆ ಬರುವ ವಾಹನಗಳ ಹೆಡ್ಲೈಟ್ ಬೆಳಕಿನ ಪ್ರಖರ ಬೆಳಕಿಗೂ ಅವಘಡಗಳು ಸಂಭವಿಸುತ್ತಿವೆ. ಇದೇ ರಸ್ತೆಯಲ್ಲಿ ಮದ್ಯ ಮಾರಾಟ ಅಂಗಡಿ ಇದ್ದು, ಅಲ್ಲಿಯೂ ಜನರು ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿರುತ್ತಾರೆ. ಬೀದಿ ದೀಪವೂ ಇಲ್ಲದ್ದರಿಂದ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿ ಎದುರಿನವರಿಗೆ ಅಪಘಾತ ಮಾಡುತ್ತಿದ್ದಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ವಿಭಾಗೀಯ ಕೇಂದ್ರಸ್ಥಾನವಾದ ಕಲಬುರಗಿ ನಗರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಲ್ಲಿ ಅಸುರಕ್ಷತೆ ಭಾವನೆ ಇದೆ. ಆದ್ದರಿಂದ ತಕ್ಷಣವೇ ಎಲ್ಲ ಬೀದಿ ದೀಪಗಳನ್ನು ದುರಸ್ತಿ ಮಾಡಿ ರಸ್ತೆಯಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು.

ಅಶ್ವಿನಿ ಪ್ರಶಾಂತ ನಗರ (ಬಿ), ಕಲಬುರಗಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-34-143146638

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.