ಕಲಬುರಗಿ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಹೊರಡಿಸಿದ್ದ ಗಡಿಪಾರು ಆದೇಶ ಉಲ್ಲಂಘಿಸಿ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ ರೌಡಿಶೀಟರ್ ಖಾಜಾಪಾಷಾ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಠಾಣೆಯ ರೌಡಿಶೀಟರ್ ಆಗಿರುವ ಖಾಜಾಪಾಷಾ ಎಂಬಾತನಿಗೆ 2025ರ ನವೆಂಬರ್ ತಿಂಗಳಲ್ಲಿ ಒಂದು ವರ್ಷದ ಅವಧಿಗೆ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿ ಗಡಿಪಾರು ಆದೇಶಿಸಲಾಗಿತ್ತು. ಆದರೆ, ಈ ಆದೇಶವನ್ನು ಉಲ್ಲಂಘಿಸಿ ಆತ ಕಲಬುರಗಿ ನಗರಕ್ಕೆ ಮರಳಿ ಬಂದಿರುವುದು ಬೆಳಕಿಗೆ ಬಂದಿದೆ.

ಬಸವ ನಗರದ ನಿವಾಸಿ, ಮದುವೆ ಸಮಾರಂಭಗಳಲ್ಲಿ ವೇಟರ್ ಕೆಲಸ ಮಾಡುವ ಆದರ್ಶ್ (22) ಎಂಬಾತ ಮೇ 10ರಂದು ಸಂಜೆ 5 ಗಂಟೆಗೆ ಮಹ್ಮದಿ ಚೌಕ್ ಹತ್ತಿರದ ರಿಯಾಸತ್ ಫಂಕ್ಷನ್ ಹಾಲ್ನಲ್ಲಿ ಕೆಲಸದ ಅವಧಿಯಲ್ಲಿ ಟೀ ಕುಡಿಯಲು ಹೋದಾಗ ಖಾಜಾಪಾಷಾ ನಗರದಲ್ಲಿಯೇ ಇರುವುದನ್ನು ಗಮನಿಸಿದ್ದ.

ಬಳಿಕ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದ. ಅದರಂತೆ ಖಾಜಾಪಾಷಾ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಈ ನಡುವೆ ಮೇ 10ರಂದೇ ರಾತ್ರಿ 7.30ರ ಸುಮಾರಿಗೆ ರಿಯಾಸತ್ ಫಂಕ್ಷನ್ ಹಾಲ್ ಸಮೀಪ ರೌಡಿಶೀಟರ್ ಖಾಜಾಪಾಷಾ ಮತ್ತು ರೆಹಾನ್ ಎಂಬಾತನ ನಡುವೆ ಗಲಾಟೆ ನಡೆದಿತ್ತು. ಖಾಜಾಪಾಷಾ ಗಾಯಗೊಂಡು ಜಿಮ್ಸ್ಗೆ ದಾಖಲಾಗಿದ್ದ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-30-813791808

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.