ಕಲಬುರಗಿ: ಸಂಜೀವಿನಿ ಸ್ವ-ಸಹಾಯ ಮಹಿಳಾ ಗುಂಪುಗಳಿಗೆ ಪ್ರಥಮಾದ್ಯತೆ ಮೇಲೆ ಸಾಲ ನೀಡುವ ಮೂಲಕ ಅವರ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್ಗಳು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಹೇಳಿದರು.

ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಸ್ವ–ಸಹಾಯ ಗುಂಪುಗಳಿಗೆ ಆಯೋಜಿಸಿದ್ದ ಬ್ಯಾಂಕ್ ಸಾಲ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಬ್ಯಾಂಕ್ ಸಾಲಕ್ಕಾಗಿ ಕಳೆದ ತ್ರೈಮಾಸಿಕದಲ್ಲಿ ಒಟ್ಟು 279 ಸ್ವ ಸಹಾಯ ಗುಂಪುಗಳು ₹7.92 ಕೋಟಿ ಸಾಲಕ್ಕೆ ಕೋರಿದ ಪ್ರಸ್ತಾವನೆ ಅರ್ಜಿಯನ್ನು ಬ್ಯಾಂಕ್ಗಳಿಗೆ ಕಳುಹಿಸಿತ್ತು. ಇದರಲ್ಲಿ ವಿವಿಧ ಬ್ಯಾಂಕ್ಗಳು 150 ಸ್ವ ಸಹಾಯ ಸಂಘಗಳಿಗೆ ₹1 ಲಕ್ಷದಿಂದ ₹3 ಲಕ್ಷದವರೆಗೆ ₹3.15 ಕೋಟಿ ಮಂಜೂರು ಮಾಡಿವೆ. ಅದರಲ್ಲಿಂದು ಪಂಜಾಬ್ ನ್ಯಾಷನಲ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೆನರಾ ಬ್ಯಾಂಕ್ನಿಂದ 65 ಗುಂಪುಗಳಿಗೆ ₹1.50 ಕೋಟಿ ಮೊತ್ತದ ಸಾಲದ ಚೆಕ್ ವಿತರಿಸಲಾಗಿದೆ’ ಎಂದರು.

‘ಕಳೆದ ಏಪ್ರಿಲ್ 15ರಿಂದ ಬ್ಯಾಂಕ್ ಲೋನ್ ಅಭಿಯಾನ ಮೂಲಕ 425 ಸ್ವ-ಸಹಾಯ ಗುಂಪುಗಳು ₹9.21 ಕೋಟಿ ಬ್ಯಾಂಕ್ ಲೋನ್ ಬೇಡಿಕೆಯ ಅರ್ಜಿಗಳನ್ನು ಬ್ಯಾಂಕುಗಳಿಗೆ ಈಗಾಗಲೇ ಕಳುಹಿಸಿದ್ದು, ಇವುಗಳಲ್ಲಿ ಮೇ 15ರೊಳಗೆ ಅರ್ಹರಿಗೆ ಸಾಲ ಮಂಜೂರು ಮಾಡಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಬ್ಯಾಂಕ್ಗಳಿಂದ ಪಡೆದ ಸಾಲ ಸೌಲಭ್ಯವನ್ನು ಸ್ವ-ಸಹಾಯ ಗುಂಪಿನ ಎಲ್ಲಾ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಜೀವನೋಪಾಯ ಚಟುವಟಿಕೆಗಳ ಬಗ್ಗೆ ಎಸ್ಬಿಐ ಆರ್. ಎಸ್ಇಟಿಐ ಮತ್ತು ಕೆವಿಕೆ ಸಂಸ್ಥೆಯಿಂದ ತರಬೇತಿ ಪಡೆಯಬೇಕು. ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವ-ಉದ್ಯೋಗ ಕೈಗೊಳ್ಳುವುದಲ್ಲದೆ ಇತರರಿಗೆ ಉದ್ಯೋಗ ನೀಡಿ ಉದ್ಯಮಿಗಳಾಗಿ’ ಎಂದು ಹಾರೈಸಿದರು.

ಲಿಂಡ್ ಬ್ಯಾಂಕ್ ವ್ಯವಸ್ಥಾಪಕ ರವಿಗೌಡ ಮಾತನಾಡಿ, ‘ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಣೆಯಲ್ಲಿ ಏನೇ ಸಮಸ್ಯೆಗಳಿದ್ದಲ್ಲಿ ಲೀಡ್ ಬ್ಯಾಂಕ್ನಿಂದ ಸ್ಪಷ್ಟನೆ ಪಡೆಯಬೇಕು. ಎಸ್ಎಚ್ಜಿಗಳಿಗೆ ಮತ್ತು ವೈಯಕ್ತಿಕ ಸಾಲ ನೀಡುವಲ್ಲಿ ವಿಳಂಬ ಮಾಡಬಾರದು’ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವ ಬಿ., ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿ ಅನಿತಾ ಹಟ್ಕಿ, ಕೆನರಾ ಬ್ಯಾಂಕ್ ಅಧಿಕಾರಿ ರಾಮಕೃಷ್ಣ, ಎಸ್.ಬಿ.ಐ. ಅಧಿಕಾರಿ ಗೋರಖನಾಥ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.

ಡಿಪಿಎಂ ಲೋಹಿತ್ಕುಮಾರ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-34-843147815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.