ಕಲಬುರಗಿ: ನಗರದ ವಾರ್ಡ್ ಸಂಖ್ಯೆ 41ರಲ್ಲಿರುವ ಎಂಎಸ್ಕೆ ಮಿಲ್ ಪ್ರದೇಶದ ಸರ್ಕಾರಿ ಉರ್ದು ಮಾದರಿಯ ಪ್ರಾಥಮಿಕ ಶಾಲೆ ಪಕ್ಕದ ವಿದ್ಯುತ್ ಪರಿವರ್ತಕಕ್ಕೆ ತಂತಿಬೇಲಿ ಅಳವಡಿಸಲಾಗಿದೆ.

ಶಾಲೆಯ ಆವರಣ ಗೋಡೆಗೆ ಹೊಂದಿಕೊಂಡಂತಿರುವ ವಿದ್ಯುತ್ ಪರಿವರ್ತಕಗಳಿಗೆ ಸುರಕ್ಷತಾ ತಂತಿಬೇಲಿ ಇಲ್ಲದಿರುವ ಕುರಿತು ‘ಪ್ರಜಾವಾಣಿ’ಯ ಮೇ 7ರ ಸಂಚಿಕೆಯಲ್ಲಿ ‘ಜೀವಕ್ಕೆ ಮಾರಕವಾದ ವಿದ್ಯುತ್ ಪರಿವರ್ತಕ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಜೆಸ್ಕಾಂ ಅಧಿಕಾರಿಗಳು ತಂತಿಬೇಲಿ ಅಳವಡಿಕೆಗೆ ಕ್ರಮ ಕೈಗೊಂಡಿದ್ದಾರೆ.

ವಿದ್ಯುತ್ ಪರಿವರ್ತಕಗಳು ತೀರಾ ಕೆಳಮಟ್ಟದಲ್ಲಿ ಇರುವುದಲ್ಲದೇ ಅವುಗಳ ಫ್ಯೂಸ್ ಬಾಕ್ಸ್ಗಳು ಕೂಡ ತೆರೆದುಬಿಡಲಾಗಿದೆ. ಟಿ.ಸಿಗಳಿಗೆ ಸುರಕ್ಷತಾ ಬೇಲಿ ಇಲ್ಲದ ಕಾರಣ ಅಪಾಯ ಆಹ್ವಾನಿಸುವಂತಿವೆ ಎಂದು ಸ್ಥಳೀಯರು ದೂರಿದ್ದರು. ಈಗ ಫ್ಯೂಸ್ ಬಾಕ್ಸ್ಗಳನ್ನು ಮುಚ್ಚಲಾಗಿದೆ.

‘ವರದಿ ಪ್ರಕಟವಾದ ಬಳಿಕ ಜೆಸ್ಕಾಂನಿಂದ ಒಂದು ಟಿ.ಸಿಗೆ ಮಾತ್ರ ಸುರಕ್ಷತಾ ಬೇಲಿ ಅಳವಡಿಸಲಾಗಿದೆ. ಆದರೆ, ತಂತಿಬೇಲಿಗೆ ಸಿಮೆಂಟ್ನಿಂದ ಭದ್ರಪಡಿಸಿಲ್ಲ. ಕಲ್ಲುಗಳನ್ನು ಜೋಡಿಸಲಾಗಿದೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಪಕ್ಕದ ಇನ್ನೊಂದು ಟಿ.ಸಿಗೂ ತಂತಿಬೇಲಿ ಅಳವಡಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-34-1749184676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.